ಐಫೋನ್
apple
ನವದೆಹಲಿ: ಇತ್ತೀಚಿನ ಸಾಫ್ಟ್‌ವೇರ್ ನವೀಕರಣದಿಂದಾಗಿ ದೇಶದಲ್ಲಿನ ಶೇ 60ರಷ್ಟು ಐಫೋನ್ ಬಳಕೆದಾರರು ಮತ್ತು ಶೇ 40ರಷ್ಟು ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ಸೇವೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ ಎಂದು ಲೋಕಲ್ ಸರ್ಕಲ್ ಸಂಸ್ಥೆ ವರದಿ ಭಾನುವಾರ ತಿಳಿಸಿದೆ.
ಕರೆ ವೈಫಲ್ಯವು ಐಫೋನ್ ಬಳಕೆದಾರರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯ ಕರೆ ಅಥವಾ ಆ್ಯಪ್ ಆಧಾರಿತ ಕರೆ ಮಾಡುವಾಗ ಕರೆ ವಿಫಲಗೊಳ್ಳುತ್ತಿದೆ. ಆ್ಯಂಡ್ರಾಯ್ಡ್ ಬಳಕೆದಾರರಿಗೆ ಆ್ಯಪ್‌ಗಳು ನಿಷ್ಕ್ರಿಯಗೊಳ್ಳುತ್ತಿವೆ ಎಂದು ತಿಳಿಸಿದೆ.
10 ಆ್ಯಪಲ್ ಐಫೋನ್ ಬಳಕೆದಾರರಲ್ಲಿ 6 ಐಫೋನ್ ಬಳಕೆದಾರರು ಐಒಎಸ್ 18 ಅನ್ನು ಅಪ್‌ಗ್ರೇಡ್ ಮಾಡಿಕೊಂಡಿದ್ದಾರೆ. ಐಒಎಸ್ 18 ಎನ್ನುವುದು ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು.
ಕಳೆದ ವರ್ಷದ ನವೆಂಬರ್ 12ರಿಂದ ಡಿಸೆಂಬರ್ 26ರ ಅವಧಿಯಲ್ಲಿ ದೇಶದ 322 ಜಿಲ್ಲೆಗಳಿಂದ 47 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಗ್ರಾಹಕರಿಂದ ಪಡೆಯಲಾಗಿತ್ತು. 31 ಸಾವಿರ ಪ್ರತಿಕ್ರಿಯೆಗಳು ಆ್ಯಪಲ್ ಐಫೋನ್‌ಗೆ ಸಂಬಂಧಿಸಿದ್ದರೆ, 16 ಸಾವಿರ ಪ್ರತಿಕ್ರಿಯೆಗಳು ಆ್ಯಂಡ್ರಾಯ್ಡ್ ಫೋನ್‌ಗೆ ಸಂಬಂಧಿಸಿವೆ ಎಂದು ವರದಿ ಹೇಳಿದೆ.
ಆ್ಯಂಡ್ರಾಯ್ಡ್ 15 ನವೀಕರಣ ಮಾಡಿಕೊಂಡಿರುವ 10 ಬಳಕೆದಾರರಲ್ಲಿ 4 ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ. 10 ಆ್ಯಪಲ್ ಐಫೋನ್ ಬಳಕೆದಾರರಲ್ಲಿ ಸುಮಾರು 9 ಜನರು ತಾವು ಎದುರಿಸುತ್ತಿರುವ ತೊಂದರೆಗೆ ಐಒಎಸ್ ಅಪ್‌ಡೇಟ್ ಕಾರಣವೆಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.