ADVERTISEMENT

Thomson AlphaBeat: ಥಿಯೇಟರ್ ಅನುಭವ ನೀಡುವ ಸೌಂಡ್ ಬಾರ್‌ಗಳು ಮಾರುಕಟ್ಟೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2025, 10:19 IST
Last Updated 11 ಜುಲೈ 2025, 10:19 IST
   

ನವದೆಹಲಿ: ಫ್ರಾನ್ಸ್‌‌ ಮೂಲದ ಎಲೆಕ್ಟ್ರಾನಿಕ್ ಉತ್ಪನ್ನಗಳ ಬ್ರಾಂಡ್ ಥಾಮ್ಸನ್‌, ತನ್ನ ಗ್ರಾಹಕರಿಗಾಗಿ ವೈಶಿಷ್ಟ್ಯಪೂರ್ಣ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮನೆಯೊಳಗೇ ಅತ್ಯುತ್ತಮ ಅನುಭವದೊಂದಿಗೆ ಸಂಗೀತ ಆಲಿಸಲು ಅನುಕೂಲವಾಗುವಂತೆ ಆಲ್ಫಾಬೀಟ್‌ ಸರಣಿಯ ನಾಲ್ಕು ಸೌಂಡ್‌ ಬಾರ್‌ಗಳನ್ನು ಬಿಡುಗಡೆ ಮಾಡಿದೆ.

ಆಲ್ಫಾಬೀಟ್‌ 80, ಆಲ್ಫಾಬೀಟ್‌ 120, ಆಲ್ಫಾಬೀಟ್‌ 160, ಆಲ್ಫಾಬೀಟ್‌ 200 ಮಾದರಿಯ ಈ ಸೌಂಡ್‌ಬಾರ್‌ಗಳು ಕೈಗೆಟುಕುವ ದರ, ಸಾಟಿಯಿಲ್ಲದ ಅನುಭವದೊಂದಿಗೆ ಗ್ರಾಹಕರಿಗೆ ಇಷ್ಟವಾಗಲಿವೆ. ಫ್ಲಿಪ್‌ಕಾರ್ಟ್‌ 'GOAT' ಮಾರಾಟದ ಅವಧಿಯಲ್ಲಿ (ಜುಲೈ 12–17) ಈ ಉತ್ಪನಗಳು ಖರೀದಿಗೆ ಲಭ್ಯವಿವೆ.

ಸ್ಪಷ್ಟ ಶಬ್ದ, ಅತ್ಯುತ್ತಮ ಪರ್ಫಾರ್ಮೆನ್ಸ್‌ನೊಂದಿಗೆ ಬಳಕೆದಾರರಿಗೆ ಥಿಯೇಟರ್ ಅನುಭವ ನೀಡುವ ಈ ಸೌಂಡ್‌ಬಾರ್‌ಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ADVERTISEMENT

ಭಾರತದಲ್ಲಿ ಈಗಾಗಲೇ ಪ್ರತಿಷ್ಠಿತ ಟಿವಿ ಬ್ರಾಂಡ್ ಎನಿಸಿಕೊಂಡಿರುವ ಥಾಮ್ಸನ್ ಪರಿಚಯಿಸುತ್ತಿರುವ ಸೌಂಡ್‌ ಬಾರ್‌ಗಳು ಮನಯೊಳಗೆ ಪಡೆಯಬಹುದಾದ ಮನರಂಜನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿವೆ. ಈ ಸೌಂಡ್‌ಬಾರ್‌ಗಳನ್ನು ಥಾಮ್ಸನ್‌ನ ಪ್ರೀಮಿಯಂ QLED ಟಿವಿ ಮತ್ತು ಸ್ಮಾರ್ಟ್ ಟಿವಿಗಳೊಂದಿಗೆ ಉತ್ತಮವಾಗಿ ಕಾರ್ಯಾಚರಿಸುವಂತೆ ರೂಪಿಸಲಾಗಿದೆ. ಇದರಿಂದ, ಗುಣಮಟ್ಟದ ದೃಶ್ಯ ಮತ್ತು ಶ್ರವಣ ಅನುಭವ ಸಿಗಲಿದೆ.

ಯಾವುದಕ್ಕೆ ಎಷ್ಟು ಹಣ?

  • ಆಲ್ಫಾಬೀಟ್‌ 80 – ₹ 2,999

  • ಆಲ್ಫಾಬೀಟ್‌ 120 – ₹ 3,999

  • ಆಲ್ಫಾಬೀಟ್‌ 160 – ₹ 4,999

  • ಆಲ್ಫಾಬೀಟ್‌ 200 – ₹ 5,999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.