
ತೇಜಸ್ ಎಂಕೆ1ಎ ಸರಣಿಯ ಲಘು ಯುದ್ಧ ವಿಮಾನ
–ಪಿಟಿಐ ಚಿತ್ರ
ಸ್ವದೇಶಿ ಸಂಸ್ಥೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿರು ತೇಜಸ್ ಯುದ್ಧ ವಿಮಾನ ದುಬೈನಲ್ಲಿ ನಡೆದ ಏರ್ ಶೋನಲ್ಲಿ ಅಪಘಾತಕ್ಕೀಡಾಗಿ ಪೈಲೆಟ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದಾಗ ಬಳಿಕ ಈ ಯುದ್ಧ ವಿಮಾನದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ತೇಜಸ್, ಭಾರತದ ಪ್ರಥಮ ಸ್ವದೇಶಿ ನಿರ್ಮಿತ ಯುದ್ಧ ವಿಮಾನವಾಗಿದೆ. ಇದನ್ನು 2019ರಿಂದ ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಭಾರತೀಯ ಸೇನೆಗೆ ನಿಯೋಜನೆಗೊಳಿಸಲಾಗಿದೆ. ಹಾಗಿದ್ದರೆ, ಈ ತೇಜಸ್ ಯುದ್ಧ ವಿಮಾನದ ವಿಶೇಷತೆಗಳು, ಸಾಮರ್ಥ್ಯ ಏನು ಎಂಬುದನ್ನು ತಿಳಿಯೋಣ.
ವಿಶೇಷತೆ ಏನು?
ವಾಯು ಮಾರ್ಗ, ನೆಲ ಮತ್ತು ಸಮುದ್ರ ಸೇರಿದಂತೆ ಬೇರೆ ಬೇರೆ ಮಾರ್ಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ತೇಜಸ್, ಎರಡು ಬ್ಯಾರೆಲ್‌ಗಳ ಸ್ವಯಂಚಾಲಿತ ಗನ್ ಹೊಂದಿದೆ.
ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿರುವ ತೇಜಸ್ ಅನ್ನು ಬೆಂಗಳೂರು ಮೂಲದ ಹೆಚ್‌ಎಎಲ್ ತಯಾರಿಸಿದೆ. ಇದು ಅಪಾಯಕಾರಿ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಜೆಡಿಎಎಂ, ಗ್ರಿಫಿನ್ ಎಲ್‌ಜಿಬಿ, ಎನ್‌ಜಿಎಲ್‌ಬಿ, ಎಸ್‌ಎಎಡಬ್ಲ್ಯೂ ಎಂಬ ಸ್ಮಾರ್ಟ್ ವೆಪನ್‌ಗಳನ್ನು ಇದು ಹೊಂದಿದೆ.
ಅತ್ಯಂತ ಹಗುರ ಹಾಗೂ ಬಲಶಾಲಿ ಯುದ್ಧವಿಮಾನವಾಗಿರುವ ತೇಜಸ್‌ನಲ್ಲಿ, ಮೂರು ಅನ್‌ಗೈಡೆಡ್ ಬಾಂಬ್‌ಗಳು, ಪೈತಾನ್–5 ಹಾಗೂ ಅಸ್ತ್ರ ಸೇರಿ 6 ಬಾಂಬ್‌ಗಳನ್ನು ಹೊಂದಿರುತ್ತದೆ.
13.2 ಮೀಟರ್ ಯುದ್ಧದ ತೇಜಸ್ 6,560 ಕೆ.ಜಿ ತೂಕ ಹೊಂದಿದ್ದು, ಇದು 13,500 ಕೆ.ಜಿ ತೂಕ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲ, ಗಂಟೆಗೆ 1,980 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಇದು, ಸುಖೋಯ್‌ಗಿಂತಲೂ ಕಮ್ಮಿ ತೂಕ ಹೊಂದಿದ್ದು, ಆಕಾಶದಲ್ಲೇ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. ಆಕಾಶದಿಂದಲೇ ಯುದ್ಧಕ್ಕೆ ತಯಾರಾಗುತ್ತದೆ.
ದೂರದಿಂದಲೇ ಎದುರಾಳಿಗಳಿಗೆ ಗುರಿ ಇಡುವ ತೇಜಸ್, ಎದುರಾಳಿ ಯುದ್ಧ ವಿಮಾನಗಳ ರಾಡಾರ್ ಕಣ್ತಪ್ಪಿಸುವ ಸಾಮರ್ಥ್ಯ ಕೂಡ ಹೊಂದಿದೆ.
ತೇಜಸ್ ಅಸ್ತ್ರ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಇದು 100 ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.