ADVERTISEMENT

Thomson TV: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ವಿಶೇಷ ರಿಯಾಯಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 10:49 IST
Last Updated 28 ಸೆಪ್ಟೆಂಬರ್ 2021, 10:49 IST
ಥಾಮ್ಸನ್ ಟಿವಿಗಳ ಮೇಲೆ ವಿಶೇಷ ಕೊಡುಗೆ
ಥಾಮ್ಸನ್ ಟಿವಿಗಳ ಮೇಲೆ ವಿಶೇಷ ಕೊಡುಗೆ    

ಬೆಂಗಳೂರು: ಅಕ್ಟೋಬರ್‌ 3ರಿಂದ ಆರಂಭವಾಗುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ವಿಶೇಷ ಆಫರ್ ಸೇಲ್‌ನಲ್ಲಿ ಥಾಮ್ಸನ್ ಟಿವಿಗಳು ಆಕರ್ಷಕ ದರದಲ್ಲಿ ದೊರೆಯಲಿವೆ.

ಹೊಸ ಸರಣಿಯ ಸ್ಮಾರ್ಟ್ ಟಿವಿ ಬಿಡುಗಡೆ ಜತೆಗೇ ಥಾಮ್ಸನ್ ಈಗಾಗಲೇ ಪರಿಚಯಿಸಿರುವ ವಿವಿಧ ಟಿವಿ ಮಾದರಿಗಳ ದರದಲ್ಲಿ ರಿಯಾಯಿತಿ ಪ್ರಕಟಿಸಿದೆ.

ಥಾಮ್ಸನ್ ಸ್ಮಾರ್ಟ್ ಟಿವಿ ದರ ₹6,999ರಿಂದ ಆರಂಭವಾದರೆ, ವಾಷಿಂಗ್ ಮೆಶೀನ್ ದರ ₹8,499 ರಿಂದ ಆರಂಭವಾಗಲಿದೆ.

ADVERTISEMENT

ಥಾಮ್ಸನ್ ಆ್ಯಂಡ್ರಾಯ್ಡ್ ಮತ್ತು ಓಥ್ ಪ್ರೊ ಟಿವಿ ಮಾದರಿ 32 ಇಂಚಿನ ಆವೃತ್ತಿಗೆ ₹12,999 ದರ ಇರಲಿದೆ. ಅಲ್ಲದೆ, ಆ್ಯಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ 10ರ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.

ಥಾಮ್ಸನ್ ಸ್ಮಾರ್ಟ್ ಟಿವಿಗಳು ಗೂಗಲ್ ಆ್ಯಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಪ್ರಮುಖ ಒಟಿಟಿ ತಾಣಗಳು ದೊರೆಯಲಿವೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.