ADVERTISEMENT

Chandrayaan-5: ಭಾರತ ಮತ್ತು ಜಪಾನ್‌ ಜಂಟಿ ಒಪ್ಪಂದ 

ಪಿಟಿಐ
Published 29 ಆಗಸ್ಟ್ 2025, 16:24 IST
Last Updated 29 ಆಗಸ್ಟ್ 2025, 16:24 IST
<div class="paragraphs"><p>ಚಂದ್ರಯಾನ</p></div>

ಚಂದ್ರಯಾನ

   

ಟೋಕಿಯೊ: ಚಂದ್ರಯಾನ –5 ಯೋಜನೆಗೆ ಭಾರತ ಮತ್ತು ಜಪಾನ್‌ ಶುಕ್ರವಾರ ಸಹಿ ಹಾಕಿದೆ. ಈ ಯೋಜನೆಯಡಿ ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಚಂದ್ರನ ಧ್ರುವಪ್ರದೇಶದ ಅಧ್ಯಯನ ನಡೆಸಲಿವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಜಪಾನ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಕ್ಸಾ ನಡುವೆ ಈ ಸಂಶೋಧನೆಗೆ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಹಾಕಲಾಯಿತು. 

ADVERTISEMENT

ಚಂದ್ರನ ದಕ್ಷಿಣ ಧ್ರುವದಲ್ಲಿನ ನೆರಳಿನ ಪ್ರದೇಶ (ಪಿಎಸ್‌ಆರ್‌) ಮತ್ತು ಚಂದ್ರನ ಮೇಲ್ಮೈನಲ್ಲಿರುವ ನೀರಿನ ಕುರಿತ ಸಂಶೋಧನೆಯನ್ನು ಮುಖ್ಯವಾಗಿ  ಚಂದ್ರಯಾನ– 5 ಯೋಜನೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.