ADVERTISEMENT

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿ ಹೆಚ್ಚು ದಿನ ಕಳೆದ ಗಗನಯಾನಿಗಳಿವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 7:34 IST
Last Updated 19 ಮಾರ್ಚ್ 2025, 7:34 IST
<div class="paragraphs"><p>ಬಾಹ್ಯಾಕಾಶದಲ್ಲಿ ಗಗನಯಾತ್ರಿ</p></div>

ಬಾಹ್ಯಾಕಾಶದಲ್ಲಿ ಗಗನಯಾತ್ರಿ

   

ರಾಯಿಟರ್ಸ್‌ ಚಿತ್ರ

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿ ಹೆಚ್ಚು ದಿನ ಕಳೆದ ಗಗನಯಾನಿಗಳ ಪಟ್ಟಿಯಲ್ಲಿ ಪೆಗ್ಗಿ ವಿಟ್ಸನ್‌ ಅವರು ಅಗ್ರಸ್ಥಾನದಲ್ಲಿದ್ದಾರೆ. ಇವರು ಒಟ್ಟು 675 ದಿನ ಬಾಹ್ಯಾಕಾಶದಲ್ಲಿ ವಾಸವಿದ್ದು, ಹಲವು ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ

ADVERTISEMENT

ಅತಿ ಹೆಚ್ಚಿನ ದಿನ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದವರ ಪಟ್ಟಿಯಲ್ಲಿ ಭಾರತದ ಸುನಿತಾ ವಿಲಿಯಮ್ಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಇವರು 606 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ಹಲವು ಮಿಷನ್‌ಗಳನ್ನು ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಸಂಶೊಧನೆಯಲ್ಲಿ ಭಾಗಿಯಾಗಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲ ನಾಸಾದಲ್ಲಿದ್ದ ಜೆಫ್‌ ವಿಲಿಯಮ್ಸ್‌ ಅವರು ಬಾಹ್ಯಾಕಾಶದಲ್ಲಿ 534 ದಿನಗಳನ್ನು ಕಳೆದಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ಬಾಹ್ಯಕಾಶ ಕೇಂದ್ರದ ವಿನ್ಯಾಸ, ಸ್ಥಾಪನೆ, ಕಾರ್ಯಾಚರಣೆ ಆರಂಭಿಸುವಲ್ಲಿ ಬಹು ಮಹತ್ವದ ಪಾತ್ರವಹಿಸಿದ್ದಾರೆ. 

ಮಾರ್ಕ್‌ ವಂದೇ ಹೇ 523 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿದ್ದರು. ಒಂದೇ ದಿನ ಅತಿ ಹೆಚ್ಚು ದೂರ ಬಾಹ್ಯಾಕಾಶ ಹಾರಾಟ ನಡೆಸಿದ ದಾಖಲೆ ಇವರದ್ದಾಗಿದೆ

ಅಮೆರಿಕ ಮೂಲದ ಎಂಜಿನಿಯರ್‌ ಮತ್ತು ನಿವೃತ್ತ ಗಗನಯಾತ್ರಿ ಸ್ಕಾಟ್‌ ಕೆಲ್ಲಿ 520ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದರು

ಹಲವು ಮಿಷನ್‌ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಮೆರಿಕದ ಗಗನಯಾತ್ರಿ ಬೆರಿ ವಿಲ್ಮೋರ್ 462 ದಿನ ಬಾಹ್ಯಾಕಾಶ ಕೇಂದ್ರದಲ್ಲಿದ್ದರು.

ಎರಡು ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಮೆರಿಕದ ಗಗನಯಾತ್ರಿ ಮೈಕ್‌ ಬ್ಯಾರಟ್‌ ಅವರು 447 ದಿನ ಬಾಹ್ಯಾಕಾಶ ಕೇಂದ್ರದಲ್ಲಿದ್ದರು

ಅಮೆರಿಕದ ಗಗನಯಾತ್ರಿ ಶೇನ್ ಕಿಂಬ್ರೋ ಅವರು 388 ದಿನ ಬಾಹ್ಯಾಕಾಶ ಕೇಂದ್ರದಲ್ಲಿದ್ದರು

ನಾಸಾದ ಗಗನಯಾತ್ರಿ ಮೈಕೆಲ್ ಫಿನ್ಕೆ ಅವರು 382 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದರು. ಇವರು ಮಿಷನ್ ಆಪರೇಷನ್‌ಗಳ ತಜ್ಞರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.