ADVERTISEMENT

ಸೂರ್ಯೋದಯದ ಮೊದಲ ಕ್ಷಣ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ? ಇಲ್ಲಿವೆ ಚಿತ್ರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2020, 8:49 IST
Last Updated 28 ಜುಲೈ 2020, 8:49 IST
ಬಾಹ್ಯಾಕಾಶದಲ್ಲಿ ಕಂಡ ಸೂರ್ಯೋದಯದ ಮೊತ್ತ ಮೊದಲ ಕ್ಷಣದ ಚಿತ್ರ (ಟ್ವಿಟರ್‌ ಚಿತ್ರ:@AstroBehnken)
ಬಾಹ್ಯಾಕಾಶದಲ್ಲಿ ಕಂಡ ಸೂರ್ಯೋದಯದ ಮೊತ್ತ ಮೊದಲ ಕ್ಷಣದ ಚಿತ್ರ (ಟ್ವಿಟರ್‌ ಚಿತ್ರ:@AstroBehnken)    

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅಮೆರಿಕದ ನಾಸಾ ಗಗನಯಾತ್ರಿ ಬಾಬ್‌ ಬೆಹ್ನ್ ಕೆನ್‌ ಎಂಬುವವರು ಸೂರ್ಯೋದಯದ ಮೊತ್ತ ಮೊದಲ ಕ್ಷಣದ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಿಂಚಿನ ಮಧ್ಯಭಾಗದಲ್ಲಿ ಜ್ಯೋತಿಯೊಂದು ಬೆಳಗಿದಂತೆ ಸೂರ್ಯ ಉದಯವಾಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಾಬ್‌ ಬೆಹ್ನ್‌ಕೆನ್‌ ಅವರು ಹಂಚಿಕೊಂಡ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ‘ನಮ್ಮ ಕಣ್ಣುಗಳಿಂದ ಈ ವಿಸ್ಮಯವನ್ನು ನೋಡುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ನಿಜಕ್ಕೂ ಅದೊಂದು ಅದೃಷ್ಟ,’ ಎಂದು ಗಗನ ಯಾತ್ರಿಗೆ ಧನ್ಯವಾದ ಅರ್ಪಿಸಿದ್ದಾರೆ.

ADVERTISEMENT

‘ನಿಮ್ಮ ಕಾರ್ಯಾಚರಣೆ ಯಶಸ್ಸು ಕಾಣಲಿ. ಸುರಕ್ಷಿತವಾಗಿ ಹಿಂದಿರುಗಿ ಬನ್ನಿ,’ ಎಂದು ಹಲವರು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.