ADVERTISEMENT

ಕೋವಿಡ್‌ ಚಿಕಿತ್ಸೆಗೆ ಕಡಿಮೆ ವೆಚ್ಚದ ಹೊಸ ಸಾಧನ: ಸೋಂಕು ನಿಗ್ರಹಿಸುವ ಚೇಂಬರ್

ಸುಮನಾ ಕೆ
Published 21 ಮೇ 2020, 8:11 IST
Last Updated 21 ಮೇ 2020, 8:11 IST
ರೋಗಿಯ ಮೇಲ್ಭಾಗ ಆವರಿಸಿರುವ ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೋಲೇಶನ್ ಚೇಂಬರ್ ಸಾಧನ
ರೋಗಿಯ ಮೇಲ್ಭಾಗ ಆವರಿಸಿರುವ ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೋಲೇಶನ್ ಚೇಂಬರ್ ಸಾಧನ   

ಬೆಂಗಳೂರು: ಕೋವಿಡ್‌ –19 ವೈರಸ್‌ ಸೋಂಕಿತರ ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿಗೆ ಸೋಂಕು ಹರಡುವುದನ್ನು ತಡೆಯಲು ಹಾಗೂ ಐಸೊಲೇಷನ್‌ ವಾರ್ಡ್‌ ಅನ್ನು ಸೋಂಕು ಮುಕ್ತವಾಗಿಡಲು ಕಡಿಮೆ ವೆಚ್ಚದಲ್ಲಿ ‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೊಲೇಷನ್ ಚೇಂಬರ್’ (ಯುಡಿಎನ್‍ಪಿಐಸಿ) ಎಂಬ ಸಾಧನವನ್ನುನಗರದ ಚಂದಾಪುರ– ಆನೇಕಲ್‌ ಮುಖ್ಯರಸ್ತೆಯಲ್ಲಿನ ಅಲಯೆನ್ಸ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡವುಅಭಿವೃದ್ಧಿಪಡಿಸಿದೆ.

ಐಐಟಿ ಖರಗ್‍ಪುರದ ಹಳೆವಿದ್ಯಾರ್ಥಿ, ಸದ್ಯ ಅಲಯೆನ್ಸ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಸದಸ್ಯ ಡಾ. ಹರಿನಾಥ್ ಐ ರೆಡ್ಡಿ ಹಾಗೂ ಕಾಲೇಜಿನ ಇಂಟರಿಮ್‌ ಡೀನ್‌ ಡಾ. ರೀಬಾಕೊರ ನೇತೃತ್ವದ ಸಂಶೋಧನಾ ವಿದ್ಯಾರ್ಥಿಗಳ ತಂಡವು ಈ ಯುಡಿಎನ್‍ಪಿಐಸಿ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಆಸ್ಪತ್ರೆಗಳಲ್ಲಿ ಅತ್ಯಾಧುನಿಕ, 10 ಹಾಸಿಗೆ ಸಾಮರ್ಥ್ಯದ ಐಸೊಲೇಷನ್‌ ವಾರ್ಡ್‌ ನಿರ್ಮಾಣ ತೀರಾ ದುಬಾರಿ. ಆದರೆಅಲಯೆನ್ಸ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ವಿನ್ಯಾಸ ಮಾಡಿರುವ,ಯುಡಿಎನ್‍ಪಿಐಸಿ ಸಾಧನ ಆಳವಡಿಸಿದ 10 ಹಾಸಿಗೆಗಳ ಸಾಮರ್ಥ್ಯದ ‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ಪೋರ್ಟೆಬಲ್ ಐಸೊಲೇಷನ್ ವಾರ್ಡ್’ಗೆ ತಗುಲುವ ವೆಚ್ಚ ₹7 ಲಕ್ಷ. ಇದುಕೋವಿಡ್‌ 19 ವೈರಸ್‌ ಹರಡುವಿಕೆಯನ್ನು ಪರಿಣಾಮಕಾರಿಯಾಗಿತಡೆಗಟ್ಟುತ್ತದೆ ಎಂದುತಂಡ ತಿಳಿಸಿದೆ.

ADVERTISEMENT

ಹೇಗೆ ಕಾರ್ಯನಿರ್ವಹಿಸುತ್ತದೆ?

‘ಪೋರ್ಟೆಬಲ್ ಐಸೊಲೇಷನ್ ವಾರ್ಡ್’ನಲ್ಲಿ ಪ್ರತಿ ಬೆಡ್‌ಗೂ‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೊಲೇಷನ್ ಚೇಂಬರ್’ (ಯುಡಿಎನ್‍ಪಿಐಸಿ) ಸಾಧನ ಜೋಡಿಸಲಾಗುತ್ತದೆ. ಕೊರೊನಾ ಸೋಂಕಿತ ವ್ಯಕ್ತಿಯ ಮೇಲ್ಭಾಗವನ್ನು ಈ ಸಾಧನವು ಪೂರ್ಣವಾಗಿ ಆವರಿಸುತ್ತದೆ. ಈ ಮೆಷಿನ್ಎರಡು ಚೇಂಬರ್‌ಗಳನ್ನು ಹೊಂದಿದ್ದು, ಒಂದರಲ್ಲಿ ರೋಗಿಗೆ ಹೊರಗಿನಿಂದ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದರಲ್ಲಿ ರೋಗಿಯು ಉಸಿರಾಡುವಾಗ, ಸೀನುವಾಗ ದೇಹದಿಂದ ಹೊರಬಂದ ಕೊರೊನಾ ವೈರಸ್‍ನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ನಡೆಯುತ್ತದೆ.

ಇಲ್ಲಿ ಆಳವಡಿಸಿರುವ ರೇಡಿಯೇಷನ್‌ ಎನರ್ಜಿ ಚೇಂಬರ್‌, ನೆರಳಾತೀತ ಕಿರಣಗಳು ಕೊರೊನಾ ವೈರಸ್‌ನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿವೆ.ಚೇಂಬರ್‌ನ ಒಳಗೆ ನೆಗೆಟಿವ್‌ ಪ್ರೆಷರ್‌ ಉಂಟುಮಾಡುವ ಮೂಲಕ ಸೋಂಕು‌ ಒಬ್ಬರಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಹಾಗೆಯೇ ಅತ್ಯಾಧುನಿಕ ಎಚ್‍ಇಪಿಎ ಫಿಲ್ಟರ್ ಐಸೊಲೇಷನ್‌ ಸಾಧನದ ಒಳಗಿನ ಗಾಳಿಯನ್ನು ಶುದ್ಧೀಕರಣಗೊಳಿಸಿ ಹೊರಗೆ ಬಿಡುಗಡೆ ಮಾಡುತ್ತದೆ’ ಎಂದು ವಿವರಣೆ ನೀಡಿದರು ಡಾ. ಹರಿನಾಥ ಐ ರೆಡ್ಡಿ.

‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೋಲೇಶನ್ ಚೇಂಬರ್’ –ಈ ಸಾಧನಕ್ಕೆ ತಗುಲುವ ವೆಚ್ಚ ₹50 ಸಾವಿರದಿಂದ ₹60 ಸಾವಿರ. ಹತ್ತು ಬೆಡ್‌ಗೆ ಈ ಸಾಧನ ಆಳವಡಿಸಲು ₹ 7 ಲಕ್ಷ ಖರ್ಚಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂಶೋಧನಾ ತಂಡ, ಈ ಸಾಧನ‌ ಅಭಿವೃದ್ಧಿಪಡಿಸಲು ಒಂದು ತಿಂಗಳು ಶ್ರಮವಹಿಸಿದೆ. ಈಗ ಸರ್ಕಾರದ ಮಟ್ಟದಲ್ಲಿ ದೃಢೀಕರಣ ಪಡೆದು, ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಸಲು ಸಜ್ಜಾಗಿದೆ. ಈ ತಂಡದ ಜತೆಗೆ ಬೆಂಗಳೂರಿನ ಇಂಡಿಯನ್ ಹೈ ವಾಕ್ಯೂಮ್ ಪಂಪ್ಸ್ ಹಾಗೂ ಎಸಿಎಸ್ ಯುವಿ ಟೆಕ್ನಾಲಜೀಸ್ ಕೈ ಜೋಡಿಸಿದೆ. ಈ ಸಾಧನವು ಹಗುರವಾಗಿದ್ದು, ಒಂದು ಹಾಸಿಗೆಯಿಂದ ಮತ್ತೊಂದು ಹಾಸಿಗೆಗೆ ಸುಲಭವಾಗಿ ಕೊಂಡೊಯ್ಯಬಹುದು. ಹಾಗೆಯೇ ಬಳಕೆಯೂ ಬಲು ಸುಲಭ ಎಂದು ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.