ADVERTISEMENT

ಇಸ್ರೊ ಕೇಂದ್ರದಲ್ಲಿ ಸಂತಸದ ವಾತಾವರಣ ಕ್ಷಣದಲ್ಲಿ ಮಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 21:28 IST
Last Updated 6 ಸೆಪ್ಟೆಂಬರ್ 2019, 21:28 IST
ವಿಕ್ರಂ ಲ್ಯಾಂಡರ್‌ನಿಂದ ಮಾಹಿತಿ ಬರದೇ ಇದ್ದಾಗ ಇಸ್ರೋ ಕೇಂದ್ರದಲ್ಲಿ ನಿರಾಶಾ ಭಾವದಲ್ಲಿದ್ದ ವಿಜ್ಞಾನಿಗಳು.
ವಿಕ್ರಂ ಲ್ಯಾಂಡರ್‌ನಿಂದ ಮಾಹಿತಿ ಬರದೇ ಇದ್ದಾಗ ಇಸ್ರೋ ಕೇಂದ್ರದಲ್ಲಿ ನಿರಾಶಾ ಭಾವದಲ್ಲಿದ್ದ ವಿಜ್ಞಾನಿಗಳು.    

ಬೆಂಗಳೂರು:ವಿಕ್ರಂ ಲ್ಯಾಂಡರ್ ಇನ್ನೇನು ಚಂದ್ರನ ನೆಲ ಸ್ಪರ್ಶಿಸಿತು ಎನ್ನುವಾಗಲೇ ಸಂಪರ್ಕ ಕಡಿದುಕೊಂಡ ಕಾರಣ ಪೀಣ್ಯದ ಇಸ್ರೊ ಕೇಂದ್ರದಲ್ಲಿ ನೆಲೆಸಿದ್ದ ಸಂಭ್ರಮದ ವಾತಾವರಣ ಕ್ಷಣದಲ್ಲೇ ಮಾಯವಾಯಿತು

ಪ್ರಧಾನಿ ನರೇಂದ್ರ ಮೋದಿ ಅವರು ಲ್ಯಾಂಡರ್ ಯೋಜನೆಯಂತೆಯೇ ಚಂದ್ರನತ್ತ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದರು. ಆದರೆ, ಕೊನೆಯ ಹಂತದಲ್ಲಿ ಅಂದರೆ 2.1 ಕಿಮೀ ದೂರದಲ್ಲಿ ಲ್ಯಾಂಡರ್ ಇದ್ದಾಗ ಅದರ ಸಂಪರ್ಕ ಕಡಿದುಕೊಂಡಿತು.

ಪ್ರಧಾನಿ ಬಳಿ ಬಂದ ಇಸ್ರೊ ಅದ್ಯಕ್ಷ ಕೆ.ಶಿವನ್ ಬೇಸರದಿಂದಲೇ ಕಿವಿಯಲ್ಲಿ ಏನೋ ಹೇಳಿದಾಗ ಏನೋ ಆಗಿದೆ ಎಂಬುದು ಎಲ್ಲರಿಗೂ ತಿಳಿಯಿತು. 15 ನಿಮಿಷದ ಬಳಿಕ ಅವರು ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಿಲ್ಲ, ಅದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದಾಗ ಎಲ್ಲರ ಮುಖದಲ್ಲೂ ನಿರಾಸೆ ಕವಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.