ADVERTISEMENT

ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ: ಸ್ಯಾನ್ ಡಿಯಾಗೊದಲ್ಲಿ ಇಳಿದ ಕ್ಯಾಪ್ಸೂಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2025, 9:49 IST
Last Updated 15 ಜುಲೈ 2025, 9:49 IST
<div class="paragraphs"><p>ಡ್ರಾಗನ್ ಕ್ಯಾಪ್ಸೂಲ್‌ನಲ್ಲಿ ಬಂದಿಳಿದ ಶುಭಾಂಶು ಶುಕ್ಲಾ ಹಾಗೂ ಇತರರು</p></div>

ಡ್ರಾಗನ್ ಕ್ಯಾಪ್ಸೂಲ್‌ನಲ್ಲಿ ಬಂದಿಳಿದ ಶುಭಾಂಶು ಶುಕ್ಲಾ ಹಾಗೂ ಇತರರು

   

ವಾಷಿಂಗ್ಟನ್‌: ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಗಗನಯಾನ ಕೈಗೊಂಡಿದ್ದ ಗಗನಯಾನಿಗಳಾದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಮಂಗಳವಾರ ಮಧ್ಯಾಹ್ನ 3.01ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿ ಬಂದು ಇಳಿದರು.

18 ದಿನಗಳ ವಾಸ್ತವ್ಯದ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿರುವ ಗಗನಯಾನಿಗಳು 22.5 ಗಂಟೆಗಳ ಪ್ರಯಾಣ ಮಾಡಿ ಭೂಮಿಗೆ ತಲುಪಿದರು.

ADVERTISEMENT

ಶುಭಾಂಶು ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೊಸ್ಜ್ ಉಜ್ನಾನ್‌ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರನ್ನು ಹೊತ್ತ ಡ್ರ್ಯಾಗನ್ 'ಗ್ರೇಸ್' ಬಾಹ್ಯಾಕಾಶ ನೌಕೆ ಸೋಮವಾರ ಸಂಜೆ 4:45ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿತ್ತು.

ಡ್ರ್ಯಾಗನ್ ಮತ್ತು ಆ್ಯಕ್ಸಿಯಂ ಸ್ಪೇಸ್ ಎಎಕ್ಸ್-4 ಸಿಬ್ಬಂದಿ ಸ್ಥಳೀಯ ಕಾಲಮಾನ ಬೆಳಗಿನ ಜಾವ 2:31ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 3.01) ಸ್ಯಾನ್ ಡಿಯಾಗೊ ಕರಾವಳಿಯಲ್ಲಿ ಇಳಿಯಲ್ಲಿ ಇಳಿದರು ಎಂದು ಸ್ಪೇಸ್‌ಎಕ್ಸ್‌ ತಿಳಿಸಿದೆ.

ಗಗನಯಾನಿಗಳು ಇಳಿಯಲು ಪ್ಯಾರಾಚೂಟ್‌ಗಳನ್ನು ಎರಡು ಹಂತಗಳಲ್ಲಿ ನಿಯೋಜಿಸಲಾಗಿತ್ತು. ಮೊದಲನೇಯದ್ದನ್ನು ಸುಮಾರು 5.7 ಕಿ.ಮೀ ಎತ್ತರದಲ್ಲಿ ಸ್ಥಿರಗೊಳಿಸಲಾಯಿತು. ನಂತರ ಮುಖ್ಯ ಪ್ಯಾರಾಚೂಟ್‌ ಅನ್ನು ಸರಿ ಸುಮಾರು ಎರಡು ಕಿ.ಮೀ ದೂರದಲ್ಲಿ ತೆರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.