ಬೆಂಗಳೂರು: ಒಂಬತ್ತು ತಿಂಗಳ ಬಳಿಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಭೂಮಿಗೆ ಮರಳಿದ್ದಾರೆ.
ಇವರು ಬಾಹ್ಯಾಕಾಶದಲ್ಲಿ ದೈಹಿಕ ಆರೋಗ್ಯಕ್ಕಾಗಿ ಏನು ಮಾಡುತ್ತಿದ್ದರು, ಏನೆಲ್ಲಾ ತಿನ್ನುತ್ತಿದ್ದರು ಎಂಬ ಮಾಹಿತಿಯನ್ನು ನಾಸಾ ಹಂಚಿಕೊಂಡಿದೆ.
ಆಹಾರ ಕ್ರಮ...
ಪಿಜ್ಜಾ
ಹುರಿದ ಕೋಳಿಮಾಂಸ
ಸೀಗಡಿ ಕಾಕ್ಟೈಲ್
ಹಾಲಿನ ಪುಡಿ
ಧಾನ್ಯಗಳು
ಟ್ಯೂನ್ ಮೀನುಗಳು
ಪ್ರೋಟಿನ್ ಹಾಗೂ ಇತರೆ ಮಾತ್ರೆಗಳು.
ತಾಜಾ ಹಣ್ಣು, ತರಕಾರಿಗಳು ( 3 ತಿಂಗಳು ಬಳಕೆಗೆ ಮಾತ್ರ)
ಪ್ಯಾಕ್ ಅಥವಾ ಫ್ರೀಜ್ ಮಾಡಿದ ಹಣ್ಣು, ತರಕಾರಿ
ಬೇಯಿಸಿದ ಮಾಂಸ
ಬೇಯಿಸಿದ ಮೊಟ್ಟೆಗಳು
ಸೂಪ್,
ಸ್ಟ್ಯೂಗಳು (stews)
530-ಗ್ಯಾಲನ್ ಶುದ್ಧ ನೀರು
ಉಪಹಾರವಾಗಿ ಹಾಲಿನ ಪುಡಿ, ಧಾನ್ಯಗಳು, ಪ್ರೋಟಿನ್ ಹಾಗೂ ಇತರೆ ಮಾತ್ರೆಗಳು, ತಾಜಾ ಹಣ್ಣು, ತರಕಾರಿಗಳು, ಬೇಯಿಸಿದ ಮೊಟ್ಟೆಗಳನ್ನು ಸೇವಿಸುತ್ತಿದ್ದರು. ಊಟವಾಗಿ ಹುರಿದ ಕೋಳಿಮಾಂಸ, ಬೇಯಿಸಿದ ಮಾಂಸ, ಪಿಜ್ಜಾ ಸೇವಿಸುತ್ತಿದ್ದರು ಎಂದು ನಾಸಾ ಹೇಳಿಕೆಯನ್ನು ಉಲ್ಲೇಖಿಸಿ ಅಮೆರಿಕದ ದಿನ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ತಣ್ಣಗಿನ ಮಾಂಸ, ಮೊಟ್ಟೆಗಳನ್ನು ಬೇಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕೆಲವು ಪದಾರ್ಥಗಳನ್ನು ಬಿಸಿ ಮಾಡಲು ಅಗತ್ಯ ಇರುವ ಪಾತ್ರೆಗಳು ಅಲ್ಲಿ ಇದ್ದವು. 530 ಗ್ಯಾಲನ್ ನೀರನ್ನು ಶೇಖರಿಸುವ ಒಂದು ಟ್ಯಾಂಕ್ ನಿಲ್ದಾಣದಲ್ಲಿತ್ತು ಎಂದು ಅದು ವರದಿ ಮಾಡಿದೆ.
ಮೂಳೆ, ಸ್ನಾಯು ಹಾಗೂ ಮಾಂಸ ಖಂಡಗಳ ಬಲವರ್ಧನೆಗಾಗಿ ಸುನಿತಾ ಹಾಗೂ ಬುಚ್ ಪ್ರತಿ ದಿನ ಎರಡು ಗಂಟೆ ವ್ಯಾಯಾಮ ಮಾಡುತ್ತಿದ್ದರು ಎಂದು ನಾಸಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.