ADVERTISEMENT

ಗೆಳತಿ ಹುಟ್ಟುಹಬ್ಬದಂದು 26 ಕಿ.ಮೀ ಓಡಿದ ಯುವಕ: ಕಾರಣ ಏನು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 11:32 IST
Last Updated 15 ಜನವರಿ 2026, 11:32 IST
<div class="paragraphs"><p>ಅವಿಕ್ ಭಟ್ಟಾಚಾರ್ಯ</p></div>

ಅವಿಕ್ ಭಟ್ಟಾಚಾರ್ಯ

   

ಚಿತ್ರ ಕೃಪೆ: Simran and Avik

ಸಾಮಾನ್ಯವಾಗಿ ಹುಟ್ಟುಹಬ್ಬಕ್ಕೆ ಉಡುಗೊರೆಗಳನ್ನು ನೀಡುತ್ತೇವೆ. ಅದಕ್ಕೂ ಹೆಚ್ಚೆಂದರೆ ಅದ್ಧೂರಿಯಾಗಿ ಆಚರಿಸುತ್ತೇವೆ. ಆದರೆ ಬೆಂಗಳೂರಿನ ಯುವಕನೊಬ್ಬ ತನ್ನ ಗೆಳತಿಯ 26ನೇ ವರ್ಷದ ಹುಟ್ಟು ಹಬ್ಬವನ್ನು 26 ಕಿ.ಮೀ ಓಡುವ ಮೂಲಕ ಆಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ADVERTISEMENT

ಈ ವಿಡಿಯೊವನ್ನು ಅವಿಕ್ ಭಟ್ಟಾಚಾರ್ಯ ಹಾಗೂ ಅವರ ಗೆಳತಿ ಸಿಮ್ರಾನ್ ಒಟ್ಟಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ 80 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

26 ಕಿ.ಮೀ ಓಟದ ಹಿಂದಿನ ಕಥೆ

ಅವಿಕ್ ಅವರ ಗೆಳತಿ ಸಿಮ್ರಾನ್‌ ತನ್ನ 26ನೇ ವರ್ಷದ ಹುಟ್ಟುಹಬ್ಬಕ್ಕೆ 26 ಕಿ.ಮೀ ಓಡಲು ಬಯಸಿದ್ದಳು. ಆದರೆ ಆನಾರೋಗ್ಯದ ಕಾರಣದಿಂದಾಗಿ ಓಡಲು ಸಾಧ್ಯವಾಗಿರಲಿಲ್ಲ. ಇದನ್ನು ತನ್ನ ಗೆಳೆಯ ಅವಿಕ್‌ನೊಂದಿಗೆ ಹಂಚಿಕೊಂಡಿದ್ದಾಳೆ. ‘ನನ್ನ ಗೆಳತಿಗೆ 26 ವರ್ಷ ತುಂಬಿದೆ, ನಾನು ಅವಳ ಹುಟ್ಟುಹಬ್ಬಕ್ಕೆ 26 ಕಿ.ಮೀ ಓಡಲಿದ್ದೇನೆ’ ಎಂದು ಅವಿಕ್ ಹೇಳಿದ್ದಾರೆ.

ಅವಿಕ್‌ ಅವರು ಓಟದ ವಿಡಿಯೊ ಮಾಡಿಕೊಂಡಿದ್ದು, ‘ಸಿಮ್ರಾನ್ ಬೇಗ ಹುಷಾರಾಗಲಿ’ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ನಡೆಯಲಿರುವ ಮ್ಯಾರಥಾನ್‌ಗೆ ಸಿಮ್ರಾನ್ ತಯಾರಿ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.