ADVERTISEMENT

#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2026, 14:06 IST
Last Updated 4 ಜನವರಿ 2026, 14:06 IST
<div class="paragraphs"><p>ಗಿಲ್ಲಿ</p></div>

ಗಿಲ್ಲಿ

   

ಬೆಂಗಳೂರು: ಕನ್ನಡ ರಿಯಾಲಿಟಿ ಶೋಗಳಲ್ಲಿ ಸದ್ಯ ಬಿಗ್‌ ಬಾಸ್‌ 12 ಟ್ರೆಂಡ್‌ ಸೃಷ್ಟಿಸಿದೆ. ಈ ಬಾರಿಯ ಆವೃತ್ತಿ ಮುಗಿಯಲು ಇನ್ನೇನು ಎರಡೇ ವಾರಗಳು ಬಾಕಿಯಿದೆ. ಈ ನಡುವೆ ಬಿಗ್‌ ಬಾಸ್ ಸ್ಪರ್ಧಿ ಗಿಲ್ಲಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. 

ಗಿಲ್ಲಿ ಬಿಗ್‌ಬಾಸ್‌ ಮನೆಯಲ್ಲಿ 100 ದಿನಗಳು ಕಳೆದಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ #GilliNata, #100daysofGILLIdomination ಟ್ಯಾಗ್‌ ಸಹಿತ ಪೋಸ್ಟ್‌ ಹಂಚಿಕೊಂಡು ಸಂಭ್ರಮಿಸಿದ್ದಾರೆ. 

ADVERTISEMENT

ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಗಿಲ್ಲಿ, ಈ ಹಿಂದೆ ಕಿಚ್ಚನ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದರು. ಫ್ಯಾಮಿಲಿ ಸುತ್ತಿನಲ್ಲಿ ಬಿಗ್‌ ಬಾಸ್‌ ಮನೆಗೆ ತಂದೆ ತಾಯಿ ಆಗಮನದಿಂದ ಖುಷಿ ಪಟ್ಟಿದ್ದ ಗಿಲ್ಲಿ, ಮರುವಾರವೇ ಕ್ಯಾಪ್ಟನ್‌ ಆಗಿ ಮನೆ ನಡೆಸಿದ್ದರು. 

ಸದ್ಯ ಗಿಲ್ಲಿ ಅಭಿಮಾನಿಗಳು ಆರಂಭಿಸಿರುವ #100daysofGILLIdomination ಟ್ಯಾಗ್‌ ಎಕ್ಸ್‌ (ಟ್ವಿಟರ್‌)ನಲ್ಲಿ ಟ್ರೆಂಡ್‌ನಲ್ಲಿದೆ. ದೇಶದಾದ್ಯಂತ 50 ಸಾವಿರಕ್ಕೂ ಹೆಚ್ಚು ಪೋಸ್ಟ್‌ಗಳು ಈ ಹ್ಯಾಷ್‌ಟ್ಯಾಗ್ ಸಹಿತ ಪೋಸ್ಟ್‌ ಆಗಿವೆ.

ಹಾಸ್ಯ, ಜಗಳ, ಟಾಸ್ಕ್‌ ಎಲ್ಲದರಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಗಿಲ್ಲಿಯೇ ಈ ಬಾರಿಯ ವಿನ್ನರ್‌ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಎಕ್ಸ್‌ನಲ್ಲಿ #GilliNata ಟ್ರೆಂಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.