ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ಚಿತ್ರ–ವಿಚಿತ್ರ ನಡೆಗಳಿಂದ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.
ಟೆಕ್ ದೈತ್ಯನಾಗಿರುವ ಈ ಉದ್ಯಮಿ ಎಕ್ಸ್‌ನಲ್ಲಂತೂ ಸದಾ ಏನಾದರೂ ಒಂದು ಪೋಸ್ಟ್, ರಿಪೋಸ್ಟ್, ಕಮೆಂಟ್‌ಗಳನ್ನು ಮಾಡುತ್ತಾ ಗಮನ ಸೆಳೆಯುತ್ತಿರುತ್ತಾರೆ.
ಇದೀಗ ತಮ್ಮ ಎಕ್ಸ್ ಖಾತೆಯ ಹೆಸರನ್ನೇ ಬದಲಿಸಿರುವ ಅವರು ಅದಕ್ಕೆ ವಿಚಿತ್ರ ಡಿಸ್‌ಪ್ಲೆ ಪ್ರೊಫೈಲ್ ಅಳವಡಿಸಿದ್ದಾರೆ.
ಎಕ್ಸ್‌ನ ಪ್ರೊಫೈಲ್ ಚಿತ್ರಕ್ಕೆ 'Kekius Maximus' ಎಂದು ಹೆಸರು ಬದಲಾಯಿಸಿರುವ ಅವರು ಡಿಪಿಗೆ 'Pepe the Frog' ಎಂಬ ಜನಪ್ರಿಯ ಮೆಮ್ ಚಿತ್ರವನ್ನು ಇಟ್ಟಿದ್ದಾರೆ.
ಇದಕ್ಕೆ ಕಾರಣವನ್ನೂ ನೀಡದ ಮಸ್ಕ್ ತಮ್ಮ ಬೆಂಬಲಿಗರ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.
'Kekius Maximus' ಎಂಬುದು ಕ್ರಿಪ್ಟೊಕರೆನ್ಸಿಯಲ್ಲಿ ಬಳಸುವ ಒಂದು ಟೋಕನ್ ಆಗಿದೆ. ಇದನ್ನು ವಿಶೇಷವಾಗಿ ಚಿತ್ರಿಸಲು 'Pepe the Frog' ಕಪ್ಪೆ ಮೆಮ್ ಅನ್ನು ಸೃಷ್ಟಿಸಲಾಗಿದೆ. ಈ ಕ್ರಿಪ್ಟೊಕರೆನ್ಸಿಯ ಟೋಕನ್ ಬೆಲೆ ಡಿಸೆಂಬರ್ ಅಂತ್ಯದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ವರದಿಯಾಗಿವೆ.
ಕ್ರಿಪ್ಟೊಕರೆನ್ಸಿಯ ಮಹತ್ವ ಸಾರುವ ದೃಷ್ಟಿಯಿಂದ ಮಸ್ಕ್ ಈ ರೀತಿ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಎಕ್ಸ್‌ನಲ್ಲಿ ಅವರಿಗೆ 209 ಮಿಲಿಯನ್ ಅತ್ಯಧಿಕ ಫಾಲೋವರ್‌ಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.