ADVERTISEMENT

ಟ್ವಿಟರ್ ಸಿಇಒ ಹುದ್ದೆ ರಾಜೀನಾಮೆಗೆ ಸಿದ್ದ ಎಂದ ಇಲಾನ್ ಮಸ್ಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 3:06 IST
Last Updated 21 ಡಿಸೆಂಬರ್ 2022, 3:06 IST
ಇಲಾನ್ ಮಸ್ಕ್
ಇಲಾನ್ ಮಸ್ಕ್   

ನ್ಯೂಯಾರ್ಕ್‌:ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಇಲಾನ್ ಮಸ್ಕ್‌ ಬುಧವಾರ ಘೋಷಿಸಿದ್ದಾರೆ.ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

'ಯಾರಾದರೊಬ್ಬರು ನನ್ನ ಕೆಲಸವನ್ನು ತೆಗೆದುಕೊಳ್ಳುವಷ್ಟು ಮೂರ್ಖರು ಎಂದು ಕಂಡುಬಂದ ತಕ್ಷಣ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ' ಮಸ್ಕ್ ಹೇಳಿದ್ದಾರೆ. 'ಹುದ್ದೆ ತೊರೆದ ನಂತರ ನಾನು ಸಾಫ್ಟ್‌ವೇರ್ ತಂಡಗಳನ್ನು ಮುನ್ನಡೆಸುತ್ತೇನೆ' ಎಂದು ಕೂಡ ಹೇಳಿದ್ದಾರೆ

ಮಸ್ಕ್‌ ಸಿಇಒ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತವೆಂದು ಹೆಚ್ಚಿನ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿರುವುದರಿಂದ ಅವರು ಈ ನಿರ್ಧಾರ ಮಾಡಿದ್ದಾರೆ.ಟ್ವಿಟರ್‌ನ ಮಾಲೀಕತ್ವ ಪಡೆದ ‌ಎರಡು ತಿಂಗಳಲ್ಲೇ ಕೋಟ್ಯಧಿಪತಿ ಮಸ್ಕ್‌ ಅವರಿಗೆ ಇದೊಂದು ಭಾರಿ ಹಿನ್ನಡೆ ಎನ್ನಲಾಗುತ್ತಿದೆ.

ADVERTISEMENT

ಭಾನುವಾರ ಸಂಜೆ ಆರಂಭವಾದ ಈ ಸಮೀಕ್ಷೆಯಲ್ಲಿ 1.75 ಕೋಟಿ ಬಳಕೆದಾರರು ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಟ್ವಿಟರ್‌ ಸಿಇಒ ಸ್ಥಾನವನ್ನು ಮಸ್ಕ್‌ ತೊರೆಯಬೇಕೆಂಬುದರ ಪರವಾಗಿ ಶೇ 57.5ರಷ್ಟು ಬಳಕೆದಾರರು ಮತ ಚಲಾಯಿಸಿದರೆ, ಶೇ42.5ರಷ್ಟು ಬಳಕೆದಾರರು ಸಿಇಒ ಸ್ಥಾನ ತೊರೆಯಬಾರದೆಂದು ಮತ ಚಲಾಯಿಸಿದ್ದರು.17,502,391 ಬಳಕೆದಾರರು ಮತ ಚಲಾಯಿಸಿದ್ದರು.

ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನದಿಂದ ತಾನು ಕೆಳಗಿಳಿಯಬೇಕೇ ಅಥವಾ ಮುಂದುವರಿಯಬೇಕೇ? ಎನ್ನುವ ಪ್ರಶ್ನೆಯನ್ನು ಬಳಕೆದಾರರ ಮುಂದಿರಿಸಿ, ಅಭಿಪ್ರಾಯ ಸಂಗ್ರಹಿಸಲುಟ್ವಿಟರ್‌ನಲ್ಲಿ ಸಮೀಕ್ಷೆಯ ಮೊರೆ ಹೋಗಿದ್ದರು. ಈ ಸಮೀಕ್ಷೆಯಲ್ಲಿ ಹೊರಹೊಮ್ಮುವ ಫಲಿತಾಂಶಕ್ಕೆ ಬದ್ಧವಾಗಿರುವುದಾಗಿಯೂ ಅವರು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.