ADVERTISEMENT

ನನ್ನನ್ನು ಟೀಕಿಸುವವರೂ ಟ್ವಿಟರ್‌ನಲ್ಲಿ ಉಳಿಯುತ್ತಾರೆ ಎಂಬ ನಂಬಿಕೆ: ಎಲಾನ್ ಮಸ್ಕ್

ಐಎಎನ್ಎಸ್
Published 26 ಏಪ್ರಿಲ್ 2022, 2:36 IST
Last Updated 26 ಏಪ್ರಿಲ್ 2022, 2:36 IST
ಉದ್ಯಮಿ ಎಲಾನ್ ಮಸ್ಕ್
ಉದ್ಯಮಿ ಎಲಾನ್ ಮಸ್ಕ್    

ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಕಂಪನಿಯ ಪೂರ್ತಿ ಷೇರುಗಳನ್ನು ಖರೀದಿಸಿ ಕಂಪನಿಯನ್ನೇ ತನ್ನದಾಗಿಸಿಕೊಂಡು ಸುದ್ದಿಯಾಗಿದ್ದಾರೆ.

44 ಬಿಲಿಯನ್ ಡಾಲರ್ (₹3.36 ಲಕ್ಷ ಕೋಟಿ) ಮೊತ್ತಕ್ಕೆ ಟ್ವಿಟರ್‌ನ ಪೂರ್ತಿ ಷೇರು ಎಲಾನ್ ಮಸ್ಕ್ ಪಾಲಾಗಿದೆ. ಮುಂದೆ ಟ್ವಿಟರ್‌ನಲ್ಲಿ ಹಲವು ಬದಲಾವಣೆಗಳು ಉಂಟಾಗಲಿವೆ ಎನ್ನುವ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ಎಲಾನ್ ಮಸ್ಕ್ ಅವರ ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.

ADVERTISEMENT

ಅದರ ಬೆನ್ನಲ್ಲೇ, ಎಲಾನ್ ಮಸ್ಕ್ ಅವರು ಟ್ವೀಟ್ ಮಾಡಿದ್ದು, ನನ್ನನ್ನು ಅತಿಯಾಗಿ ಟೀಕಿಸುವವರೂ ಟ್ವಿಟರ್‌ನಲ್ಲಿಯೇ ಉಳಿಯಲಿದ್ದಾರೆ ಎಂದು ಭಾವಿಸಿದ್ದೇನೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅದೇ ತಾನೆ.. ಎಂದು ಹೇಳಿದ್ದಾರೆ.

ಹಲವು ಸಂದರ್ಭಗಳಲ್ಲಿ ಎಲಾನ್ ಮಸ್ಕ್ ಅವರ ಉದ್ಯಮ ಮತ್ತು ವ್ಯಾಪಾರ ನೀತಿಯನ್ನು ಜನರು ಟ್ವಿಟರ್‌ನಲ್ಲಿ ಟೀಕಿಸಿದ್ದರು. ಈಗ ಎಲಾನ್ ಮಸ್ಕ್ ಅವರೇ ಟ್ವಿಟರ್‌ ಅನ್ನು ಖರೀದಿಸಿದ್ದರಿಂದ ಟೀಕಿಸುವವರೂ ಟ್ವಿಟರ್‌ನಲ್ಲಿಯೇ ಇರಲಿ ಎಂಬರ್ಥದಲ್ಲಿ ಮಸ್ಕ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.