ಕಿರು ವಿಡಿಯೊ ವೈಶಿಷ್ಟ್ಯದ ಮೂಲಕ ಇನ್‌ಸ್ಟಾಗ್ರಾಂ ಯಶಸ್ವಿಯಾದಂತೆ, ಟಿಕ್‌ಟಾಕ್ ಮಾದರಿಯ ಕಿರು ವಿಡಿಯೊ ವೈಶಿಷ್ಟ್ಯವನ್ನು ಪರಿಚಯಿಸಲು ಫೇಸ್‌ಬುಕ್ ಸಜ್ಜಾಗಿದೆ.
ಗಾಲ್ವನ್ ಕಣಿವೆಯಲ್ಲಿ ಚೀನಾ–ಭಾರತ ಸೇನೆಗಳು ಸಂಘರ್ಷ ನಡೆಸಿದ್ದವು. ಇದಾದ ಬಳಿಕಚೀನಾ ಮೂಲದ ಆ್ಯಪ್ ಅನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಫೇಸ್‌ಬುಕ್ ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಈ ವೈಶಿಷ್ಟ್ಯದ ಪರೀಕ್ಷೆಗೆ ಮುಂದಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ವಿಶ್ಲೇಷಕ ಮ್ಯಾಟ್ ನವರ್ರಾ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.