ADVERTISEMENT

ನಾವು ಬಳಸುವ ಕ್ಯಾಲೆಂಡರ್‌ ಯಾವುದು? ಹೊಸ ವರ್ಷಕ್ಕೂ ಮುನ್ನ ಈ ಮಾಹಿತಿ ತಿಳಿಯಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2025, 13:02 IST
Last Updated 29 ಡಿಸೆಂಬರ್ 2025, 13:02 IST
<div class="paragraphs"><p>ಚಿತ್ರ;ಎಐ</p></div>
   

ಚಿತ್ರ;ಎಐ

ಕ್ಯಾಲೆಂಡರ್ ಮಾನವನ ಅವಶ್ಯಕತೆಗಳಲ್ಲಿ ಒಂದಾಗಿದೆ. ಅನೇಕರು ‍ಪ್ರತಿ ದಿನ ಎದ್ದ ತಕ್ಷಣ ಕ್ಯಾಲೆಂಡರ್ ಗಮನಿಸುತ್ತಾರೆ. ಯಾವ ದಿನ ರಜೆ ಇದೆ, ದಿನದ ವಿಶೇಷತೆ ಏನು? ತಿಳಿಯಲು ಕ್ಯಾಲೆಂಡರ್‌ ನೋಡುವವರಿದ್ದಾರೆ.

ಕ್ಯಾಲೆಂಡರ್‌ ವರ್ಷ, ತಿಂಗಳು, ವಾರ, ದಿನ, ಶುಭ, ಅಶುಭ ದಿನಗಳು, ಗಳಿಗೆಗಳು, ಗ್ರಹಣಗಳೂ ಸೇರಿದಂತೆ ನಕ್ಷತ್ರ ಹಾಗೂ ಮಳೆ ಯೋಗಗಳನ್ನು ಒಳಗೊಂಡಿರುತ್ತದೆ. ಅಷ್ಟಕ್ಕೂ ಇಂದು ನಾವು ನೀವು ‌ಬಳಸುತ್ತಿರುವ ಕ್ಯಾಲೆಂಡರ್‌ ಯಾವುದು? ಅದರ ಇತಿಹಾಸವೇನು? ಕ್ಯಾಲೆಂಡರ್‌ ರಚನೆಯ ಇಂದಿನ ಕಥೆಯೇನು? ಎಂಬುದನ್ನು ತಿಳಿಯೋಣ. 

ADVERTISEMENT

ಭೂಮಿಯ ಮೇಲೆ ಮಾನವ ನಾಗರಿಕತೆಯನ್ನು ಆರಂಭಿಸಿದಾಗಿನಿಂದಲೂ ಕ್ಯಾಲೆಂಡರ್‌ ಕಲ್ಪನೆ ಇದೆ ಎಂದು ಸಂಶೋಧಕರು ಹೇಳುತ್ತಾರೆ. ಇತಿಹಾಸದ ಪ್ರಕಾರ ಪ್ರಾಚೀನ ಈಜಿಪ್ಟಿಯನ್ನರು ಹಾಗೂ ಬ್ಯಾಬಿಲೋನಿಯನ್ನರು ಕೃಷಿ ಕಾರ್ಯ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಸೂರ್ಯ ಅಥವಾ ಚಂದ್ರ ಚಕ್ರಗಳನ್ನು ಬಳಸುತ್ತಿದ್ದರು. ನಂತರ ಗ್ರಹಗಳ ಚಲನೆಗಳ ಕುರಿತು ಪ್ರಾಥಮಿಕ ಜ್ಞಾನ ಪಡೆದರು. ಇದಾದ ಬಳಿಕ ಸಮಯ ಲೆಕ್ಕಹಾಕುವ ತಂತ್ರಗಳನ್ನು ಕಂಡುಕೊಂಡರು. ಬಳಿಕ ರೋಮ್‌ನಲ್ಲಿ ಜೂಲಿಯಸ್‌ ಸೀಸರ್‌ ‘ಜೂಲಿಯನ್ ಕ್ಯಾಲೆಂಡರ್’ ಜಾರಿಗೆ ತಂದರು ಎಂದು ಹೇಳಲಾಗುತ್ತದೆ.  

ಗ್ರೆಗೋರಿಯನ್ ಕ್ಯಾಲೆಂಡರ್‌ನ ಇತಿಹಾಸ : 

ಆರಂಭಿಕವಾಗಿ ಹಲವು ಕ್ಯಾಲೆಂಡರ್‌ಗಳು ಚಾಲ್ತಿಯಲ್ಲಿದ್ದವು. ಅವುಗಳ ನವೀಕರಣ ರೂಪವಾಗಿ ಜೂಲಿಯಸ್‌ ಕ್ಯಾಲೆಂಡರ್ ಬಂದಿತು. ಅದಕ್ಕಿಂತಲೂ ತುಸು ಬದಲಾವಣೆಯೊಂದಿಗೆ ‘ಗ್ರೆಗೋರಿಯನ್ ಕ್ಯಾಲೆಂಡರ್’ ಆರಂಭವಾಯಿತು. ಇದು ಜೂಲಿಯಸ್‌ ಕ್ಯಾಲೆಂಡರ್‌ನಲ್ಲಿದ್ದ ದೋಷಗಳನ್ನು ಸರಿಪಡಿಸಿತು. ಇಂದು ಭಾತರದಲ್ಲಿ ನಾವು ನೀವೆಲ್ಲರೂ ಈ ಕ್ಯಾಲೆಂಡರ್‌ ಅನ್ನೇ ಬಳಸುತ್ತಿದ್ದೇವೆ. 

ವೈದ್ಯ ಮತ್ತು ಖಗೋಳಶಾಸ್ತ್ರಜ್ಞನಾಗಿದ್ದ ಲುಯಿಗಿ ಲಿಲಿಯೊ (ಅಲೋಸಿಯಸ್ ಲಿಲಿಯಸ್) ಈ ಕ್ಯಾಲೆಂಡರ್‌ನ ಸಂಪೂರ್ಣ ವಿನ್ಯಾಸ ಮಾಡಿದರು.1582ರ ಫೆಬ್ರವರಿ 24ರಂದು ಪೋಪ್ 13ನೆ ಗ್ರೆಗೊರಿಯ ಆದೇಶದ ಮೇರೆಗೆ ಈ ಕ್ಯಾಲೆಂಡರ್‌ ಬಿಡುಗಡೆಗೊಂಡು, ಯೂರೋಪಿನಾದ್ಯಂತ ಪ್ರಸಿದ್ದಿ ಪಡೆಯಿತು.

ಕ್ಯಾಲೆಂಡರ್‌ ರಚನೆಗೆ ಕಾರಣವೇನು? 

ಕ್ರಿಸ್ತ ಪೂರ್ವ 46ರಲ್ಲಿ ಜೂಲಿಯಸ್‌ ಸೀಸರ್‌ ಕ್ಯಾಲೆಂಡರ್‌ ಜಾರಿಗೆ ಬಂದಿತು. ಇದರ ಅನ್ವಯ ಒಂದು ವರ್ಷದ ಅವಧಿ ಪೂರ್ಣಗೊಳ್ಳಲು 365 ದಿನ 6 ಗಂಟೆಗಳು ಇತ್ತು. ಈ ಅವಧಿ ವೈಜ್ಞಾನಿಕವಾಗಿ ವ್ಯತ್ಯಾಸವಿದ್ದ ಕಾರಣಕ್ಕಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ರಚನೆಯಾಯಿತು. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಒಂದು ವರ್ಷದ ಅವಧಿ 365 ದಿನ 5ಗಂಟೆ 46 ನಿಮಿಷ ಎಂದು ತೋರಿಸಿತು.

ಆರಂಭಿಕವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಸ್ಪೇನ್, ಪೋರ್ಚುಗಲ್, ಇಟಲಿ ಮತ್ತು ಫ್ರಾನ್ಸ್‌ನಂತಹ ಕ್ಯಾಥೋಲಿಕ್ ದೇಶಗಳು ಅಳವಡಿಸಿಕೊಂಡವು. ಕೆಲವು ಪ್ರೊಟೆಸ್ಟಂಟ್ ದೇಶಗಳು ಇದನ್ನು ಕೆಲ ಕಾಲ ವಿರೋಧಿಸಿದವು. ನಂತರ 1752ರಲ್ಲಿ ಬ್ರಿಟನ್‌ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡಿತು. ಬಳಿಕ ಜಪಾನ್, ಕೊರಿಯಾ, ಚೀನಾ ಸೇರಿದಂತೆ ಪೂರ್ವ ಏಷ್ಯಾದ ದೇಶಗಳು ಅಳವಡಿಸಿಕೊಂಡವು. 

ಇತರೆ ಕ್ಯಾಲೆಂಡರ್‌ಗಳು: 

ಯಹೂದಿ ಕ್ಯಾಲೆಂಡರ್: ಸೂರ್ಯ ಚಂದ್ರರ ಚಲನೆಯನ್ನು ಆಧರಿಸಿ ತಯಾರಿಸಿದಂತಹ ಕ್ಯಾಲೆಂಡರ್‌ ಆಗಿದೆ. ಇದನ್ನು ಮುಖ್ಯವಾಗಿ ಯಹೂದಿ ಸಮುದಾಯದವರು ತಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೆ ಬಳಕೆ ಮಾಡುತ್ತಾರೆ. ಚೀನಾದಲ್ಲಿ ಕೃಷಿಕರು ಈ ಕ್ಯಾಲೆಂಡರ್ ಬಳಕೆ ಮಾಡುತ್ತಾರೆ. 

ಇಸ್ಲಾಮಿಕ್ ಕ್ಯಾಲೆಂಡರ್ : ಚಂದ್ರನ ಚಲನೆ ಆಧಾರವಾಗಿಟ್ಟುಕೊಂಡು ರಚನೆಯಾದ ಕ್ಯಾಲೆಂಡರ್‌ ಇದಾಗಿದೆ. ಅರಬ್ ದೇಶ ಹಾಗೂ ಮುಸ್ಲಿಂ ಸಮುದಾಯಗಳು ‌ಧಾರ್ಮಿಕ ದೃಷ್ಟಿಯಿಂದ ಇದನ್ನು ಬಳಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.