ನಮ್ರತಾ ಗೌಡ
ಚಿತ್ರ: Instagram / namratha__gowdaofficial
'ಹಾಯ್, ನಾನು ಹಲವು ರಾಜಕಾರಣಿಗಳು ಮತ್ತು ಅತಿಗಣ್ಯರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಡೇಟಿಂಗ್ ವ್ಯವಸ್ಥೆ ಮಾಡುತ್ತೇನೆ. ಈ ವಿಚಾರವನ್ನು ಗೋಪ್ಯವಾಗಿಡಲಾಗುವುದು. ನಿಮ್ಮ ಖಾಸಗಿ ನಂಬರ್ ಅಥವಾ ಫೋಟೊಗಳನ್ನು ಹಂಚಿಕೊಳ್ಳಬೇಕಿಲ್ಲ. ನಿಮಗೆ ಭಾರಿ ಹಣ ಪಾವತಿಸಲಾಗುವುದು. ಇದು ಶೇ 200ರಷ್ಟು ಖಾಸಗಿ ವಿಚಾರ. ನಿಮಗೆ ಆಸಕ್ತಿ ಇದ್ದರೆ, ವಿವರಕ್ಕಾಗಿ ವ್ಯಾನಿಷ್ ಮೋಡ್‌ನಲ್ಲಿ ಸಂದೇಶ ಕಳುಹಿಸಿ'
ಹೀಗೊಂದು ಸಂದೇಶವನ್ನು ತಮಗೆ ಕಳುಹಿಸಲಾಗಿದೆ ಎಂದು ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ರೋಷನ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್ ಮೂಲಕ ತಮಗೆ ಕಳುಹಿಸಿರುವ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ನಮ್ರತಾ, 'ಮಿಸ್ಟರ್ ರೋಷನ್, ಇದನ್ನೆಲ್ಲ ನಿಲ್ಲಿಸಿ' ಎಂದು ಎಚ್ಚರಿಸಿದ್ದಾರೆ.
ಆ ವ್ಯಕ್ತಿಯು ಕಳೆದ ವರ್ಷ ಜುಲೈನಲ್ಲಿ ಕಳುಹಿಸಿದ್ದ ಸಂದೇಶವನ್ನು ಮತ್ತೆ ಕಳುಹಿಸಿದ್ದಾನೆ. ಹಿಂದೆಯೂ ಈ ರೀತಿ ಕಳುಹಿಸಿರುವ ಸಾಧ್ಯತೆಯನ್ನು ಸ್ಕ್ರೀನ್ ಶಾಟ್ ತೆರೆದಿಟ್ಟಿದೆ.
ಅಷ್ಟಕ್ಕೂ ಈ ರೋಷನ್ ಯಾರು? ಯಾವ ರಾಜಕಾರಣಿ ಅಥವಾ ಗಣ್ಯವ್ಯಕ್ತಿಗಾಗಿ ಈತ ಕೆಲಸ ಮಾಡುತ್ತಿದ್ದಾನೆ ಎಂಬುದು ಬಹಿರಂಗವಾಗಿಲ್ಲ.
ನಮ್ರತಾ ಗೌಡ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್
ನಮ್ರತಾ ಗೌಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.