ADVERTISEMENT

ICC World Cup Cricket: ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2023, 2:30 IST
Last Updated 5 ಅಕ್ಟೋಬರ್ 2023, 2:30 IST
   

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದಿನಿಂದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ‌ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಿಮೇಟೆಡ್ ಡೂಡಲ್‌ನೊಂದಿಗೆ ವಿಶ್ವಕಪ್‌ ಆರಂಭವನ್ನು ಗೂಗಲ್ ಆಚರಿಸಿದೆ.

ವಿಶ್ವಕಪ್‌ಗೆ ಶುಭ ಕೋರಲು ಗೂಗಲ್‌ ಎರಡು ಬಾತುಕೋಳಿಗಳು ವಿಕೆಟ್‌ಗಳ ನಡುವೆ ಓಡುತ್ತಿರುವುದನ್ನು ಡೂಡಲ್ ತೋರಿಸುತ್ತದೆ. ಒಮ್ಮೆ ಬಳಕೆದಾರರು ಗೂಗಲ್‌ ಮುಖಪುಟದಲ್ಲಿ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಇಡೀ ಪಂದ್ಯಾವಳಿಯ ಪೂರ್ಣ ವೇಳಾಪಟ್ಟಿಯನ್ನು ತೋರಿಸುತ್ತದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್, ವಿಶ್ವದ ಪ್ರಮುಖ, ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಅತ್ಯಂತ ಜನಪ್ರಿಯ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿದೆ.

ADVERTISEMENT

ಈ ವರ್ಷ13 ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯನ್ನು ಭಾರತ ಆಯೋಜಿಸಿದೆ. ಹತ್ತು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿಲಿವೆ. ಆರಂಭಿಕ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.