
ಇನ್‌ಸ್ಟಾಗ್ರಾಂ
ಬೆಂಗಳೂರು: ಮೆಟಾದ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಹೊಸ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಅದರಂತೆಯೇ ಯಾವುದೇ ಖಾತೆ ಪಬ್ಲಿಕ್ ಅಕೌಂಟ್ ಆಗಿದ್ದಲ್ಲಿ ಅಲ್ಲಿ ಪ್ರಕಟವಾದ ಸ್ಟೋರಿಗಳನ್ನು ತಮ್ಮ ಪುಟದಲ್ಲಿ ಪ್ರಕಟಿಸಲು ಅನುಕೂಲವಾಗುವಂತೆ ರಿಶೇರ್ ಆಯ್ಕೆಯನ್ನು ನೀಡಿದೆ.
ಈ ಕುರಿತಂತೆ ಥ್ರೆಡ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೆಟಾ, ತಮ್ಮ ಸ್ಟೋರಿಗಳನ್ನು ಬೇರೆಯವರು ಅವರ ಪುಟದಲ್ಲಿ ಹಂಚಿಕೊಳ್ಳುವುದನ್ನು ನಿರ್ಬಂಧಿಸಲೂ ಅವಕಾಶವಿದ್ದು, ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಇದನ್ನು ಮಾಡಬಹುದು ಎಂದಿದೆ.
ಈ ಮೊದಲು ಯಾವುದೇ ಫೋಟೊವನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿರುವ ವ್ಯಕ್ತಿಗಳನ್ನು ಟ್ಯಾಗ್ ಮಾಡಲು ಅವಕಾಶವಿತ್ತು. ಒಮ್ಮೆ ಪೋಸ್ಟ್ ಮಾಡಿದ ನಂತರ ಅದಕ್ಕೆ ಅವಕಾಶ ಇರಲಿಲ್ಲ. ಹಾಗೆಯೇ ಪಬ್ಲಿಕ್ ಅಕೌಂಟ್‌ನಲ್ಲಿರುವ ಯಾವುದೇ ತಮಾಷೆಯ ಅಥವಾ ಭಾವನಾತ್ಮಕ ಸ್ಟೋರಿಗಳನ್ನು ಹಂಚಿಕೊಳ್ಳಬೇಕೆಂದರೆ ಅದರ ಸ್ಕ್ರೀನ್‌ಶಾಟ್ ತೆಗೆದು ಹಂಚಿಕೊಳ್ಳಬಹುದಿತ್ತು. ಆದರೆ ಹೊಸ ಅಪ್‌ಡೇಟ್ ಮೂಲಕ ಸ್ಟೋರಿಗಳನ್ನು ನೇರವಾಗಿ ನಮ್ಮದೇ ಖಾತೆಯಲ್ಲಿ ರಿಶೇರ್ ಮಾಡಬಹುದು.
2025ರ ಆರಂಭದಲ್ಲೇ ರೀಲ್ಸ್‌ಗಳ ರಿಪೋಸ್ಟ್ ಕುರಿತು ಮೆಟಾ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ ಹೊಸ ಸೌಲಭ್ಯವನ್ನು ಅಪ್‌ಡೇಟ್ ಮೂಲಕ ಮೆಟಾ ಈಗ ಬಿಡುಗಡೆ ಮಾಡಿದೆ. ಇದರಿಂದಾಗಿ ಪಬ್ಲಿಕ್ ಪ್ರೊಫೈಲ್‌ನ ರೀಲ್ಸ್ ಹಾಗೂ ಫೀಡ್ ಪೋಸ್ಟ್‌ಗಳನ್ನು ನೇರವಾಗಿ ತಮ್ಮದೇ ಪುಟದಲ್ಲಿ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗೆ ಮಾಡಿದಲ್ಲಿ ರೀಲ್ಸ್ ಸೃಷ್ಟಿಸಿದ ಮೂಲ ವ್ಯಕ್ತಿಗೆ ಸಹಜವಾಗಿ ಕ್ರೆಡಿಟ್ ಸಿಗುವಂತೆಯೂ ಮೆಟಾ ಎಚ್ಚರ ವಹಿಸಿದೆ.
ನಿಮ್ಮ ಗ್ಯಾಜೆಟ್‌ನಲ್ಲಿ ಇನ್‌ಸ್ಟಾಗ್ರಾಂ ಆ್ಯಪ್ ತೆರೆಯಿರಿ
ಪಬ್ಲಿಕ್ ಅಕೌಂಟ್‌ನಲ್ಲಿರುವ ಸ್ಟೋರಿ ಮೇಲೆ ಕ್ಲಿಕ್ ಮಾಡಿ
ಅಲ್ಲಿ ಮೆಸೇಜ್ ಬಾಕ್ಸ್ ಪಕ್ಕದಲ್ಲಿರುವ ‘ಶೇರ್’ ಐಕಾನ್ ಆಯ್ಕೆ ಮಾಡಿಕೊಳ್ಳಿ. ‘ಆ್ಯಡ್ ಟು ಯುವರ್ ಸ್ಟೋರಿ’ ಎಂದು ಆಯ್ಕೆ ಮಾಡಿ.
ಈ ಸ್ಟೋರಿ ಈಗ ನಿಮ್ಮ ಖಾತೆಯಲ್ಲಿ ಪ್ರಕಟವಾಗುತ್ತದೆ. ಅದರೊಂದಿಗೆ ಮೂಲ ರೀಲ್ಸ್ ರಚಿಸಿದವರು ಯಾರು ಎಂಬುದು ರೀಲ್ಸ್ ಜತೆ ಕಾಣಿಸಲಿದೆ.
ಈ ಹೊಸ ಅಪ್‌ಡೇಟ್ ಈಗಾಗಲೇ ಆ್ಯಪಲ್‌ನ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿದೆ. ಒಂದೊಮ್ಮೆ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ರೀಲ್ಸ್‌ಗಳನ್ನು ಬೇರೆಯವರು ರಿಶೇರ್ ಮೂಲಕ ಹಂಚಿಕೊಳ್ಳಲು ಇಷ್ಟಪಡದಿದ್ದರೆ, ಸೆಟ್ಟಿಂಗ್‌ನಲ್ಲಿ ತಮ್ಮ ಖಾತೆಯನ್ನು ಪಬ್ಲಿಕ್‌ನಿಂದ ಪ್ರೈವೇಟ್ ಮಾಡಲು ಅವಕಾಶವನ್ನೂ ನೀಡಲಾಗಿದೆ.
ಇನ್‌ಸ್ಟಾಗ್ರಾಂನ ಖಾತೆಗೆ ತೆರಳಿ ಅಲ್ಲಿ ಸೆಟ್ಟಿಂಗ್ಸ್ ಮತ್ತು ಆ್ಯಕ್ಟಿವಿಟಿ ಆಯ್ಕೆ ಮಾಡಿಕೊಳ್ಳಿ
ಪ್ರೈವೆಸಿ ಆಯ್ಕೆ ಮಾಡಿಕೊಳ್ಳಿ. ನಂತರ ಸ್ಟೋರಿ ಆಯ್ಕೆ ಮಾಡಿ.
‘ಅಲೋ ಶೇರಿಂಗ್ ಟು ಸ್ಟೋರಿ’ (Allow sharing to story) ಆಯ್ಕೆ ಮಾಡಿ, ‘ಆಫ್’ ಗುಂಡಿಯನ್ನು ಆಯ್ಕೆ ಮಾಡಿ.
ಇದಾದ ನಂತರ ನಿಮ್ಮ ಫಾಲೊವರ್‌ಗಳು ನಿಮ್ಮ ಸ್ಟೋರಿಗಳನ್ನು ರಿಶೇರ್ ಮಾಡಲು ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.