ADVERTISEMENT

ಕೋವಿಡ್‌–19 ಪ್ರಕರಣಗಳ ಟ್ರ್ಯಾಕರ್‌: ಮೈಕ್ರೊಸಾಫ್ಟ್ Bingನಲ್ಲಿ ಮಾಹಿತಿ

ಏಜೆನ್ಸೀಸ್
Published 17 ಮಾರ್ಚ್ 2020, 5:44 IST
Last Updated 17 ಮಾರ್ಚ್ 2020, 5:44 IST
ಬಿಂಗ್‌ ವೆಬ್‌ ಪೋರ್ಟಲ್‌ನಲ್ಲಿ ಕೋವಿಡ್‌–19 ಪ್ರಕರಣಗಳ ಮಾಹಿತಿ
ಬಿಂಗ್‌ ವೆಬ್‌ ಪೋರ್ಟಲ್‌ನಲ್ಲಿ ಕೋವಿಡ್‌–19 ಪ್ರಕರಣಗಳ ಮಾಹಿತಿ   
""

ಬೆಂಗಳೂರು: ಜಾಗತಿಕಕೊರೊನಾ ವೈರಸ್‌ ಸೋಂಕು ಪ್ರಕರಣಗಳ ದಾಖಲೆ ಇಡಲು ಮೈಕ್ರೊಸಾಫ್ಟ್‌ ಸೋಮವಾರ ವೆಬ್‌ ಪೋರ್ಟಲ್‌ಗೆ ಚಾಲನೆ ನೀಡಿದೆ.

ಕಂಪನಿಯ 'ಬಿಂಗ್‌' ವೆಬ್‌ ಬ್ರೌಸರ್‌ನ ಭಾಗವಾಗಿ ಕೋವಿಡ್‌–19 ಪ್ರಕರಣಗಳ ಲೆಕ್ಕ ಇಟ್ಟಿರುವ ಪೋರ್ಟಲ್‌ ಲಭ್ಯವಿದೆ. ರಾಷ್ಟ್ರವಾರು ದಾಖಲಾಗಿರುವ ಕೋವಿಡ್‌–19 ಪ್ರಕರಣಗಳು, ಅದರಲ್ಲಿ ಗುಣಮುಖರಾಗಿರುವವರು ಸಂಖ್ಯೆ ನೀಡಲಾಗಿದೆ. ಇದರೊಂದಿಗೆ ಸಾವಿಗೀಡಾದವರ ಸಂಖ್ಯೆಯೂ ಲೆಕ್ಕ ಮಾಡಲಾಗಿದೆ.

ಯಾವುದೇ ಹುಡುಕು ತಾಣದಲ್ಲಿwww.bing.com/covid ಎಂದು ಟೈಪಿಸಿದರೆ ಪ್ರತ್ಯೇಕ ಪುಟ ತೆರೆದುಕೊಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಅಮೆರಿಕದ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರಗಳು, ಯುರೋಪ್‌ನರೋಗ ತಡೆ ಮತ್ತು ನಿಯಂತ್ರಣ ಕೇಂದ್ರಗಳು ಸೇರಿದಂತೆ ನಂಬಲು ಅರ್ಹವಾದ ಮೂಲಗಳಿಂದ ಮಾಹಿತಿ ಪಡೆದು ಸಂಗ್ರಹಿಸಲಾಗುತ್ತಿದೆ.

ADVERTISEMENT

ಕೋವಿಡ್–19 ಪ್ರಕರಣ ದಾಖಲಾಗಿರುವ ಎಲ್ಲ ರಾಷ್ಟ್ರಗಳ ಪರಿಸ್ಥಿತಿಯ ಮಾಹಿತಿಯೂ ಲಭ್ಯವಿದೆ. ನಿರ್ದಿಷ್ಟ ರಾಷ್ಟ್ರದ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೊಗಳು, ಸುದ್ದಿ ಹಾಗೂ ಲಿಂಕ್‌ಗಳ ಪಟ್ಟಿ ಸಿಗುತ್ತವೆ. ಅಮೆರಿಕದಲ್ಲಿ ರಾಜ್ಯವಾರ ಪ್ರಕರಣಗಳನ್ನು ಪ‍್ರತ್ಯೇಕಿಸಿ ಮಾಹಿತಿ ನೀಡಲಾಗಿದೆ.

ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಜಾಗೃತಿ ಮೂಡಿಸುವ ಅಗತ್ಯವಿರುವ ಮಾಹಿತಿಗಳನ್ನು ಮೈಕ್ರೊಸಾಫ್ಟ್‌ ಹಾಗೂ ಗೂಗಲ್‌ ಸೇರಿದಂತೆ ಹಲವು ಟೆಕ್‌ ಕಂಪನಿಗಳು ಬಳಕೆದಾರರಿಗೆ ಒದಗಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.