ADVERTISEMENT

ಭಾರತದಲ್ಲಿ ಹೆಚ್ಚಾಗುತ್ತಿದೆ ವರ್ಚುವಲ್ ಡೇಟಿಂಗ್ ನಡೆಸುವವರ ಪ್ರಮಾಣ

ಐಎಎನ್ಎಸ್
Published 13 ಫೆಬ್ರುವರಿ 2023, 11:13 IST
Last Updated 13 ಫೆಬ್ರುವರಿ 2023, 11:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶಾಪಿಂಗ್, ಸೋಶಿಯೊ ಗ್ಯಾದರಿಂಗ್ ನಂತಹ ಚಟುವಟಿಕೆಗಳು ವರ್ಚುವಲ್ ಆಗಿರುವುದು ಸಾಮಾನ್ಯವಾಗಿದೆ.

ಅದೇ ರೀತಿ ಡೇಟಿಂಗ್ ಅಥವಾ ಸಹ ಜೀವನ ಕೂಡ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವರ್ಚುವಲ್‌ ಆಗಿನೇ (ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ) ಹೆಚ್ಚು ಬಳಕೆಯಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.

ಹಣಕಾಸು ಸೇವಾ ತಂತ್ರಜ್ಞಾನದ ಸಂಸ್ಥೆಯಾಗಿರುವ ಎಫ್‌ಐಎಸ್ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ, ಶೇ 60 ರಷ್ಟು ಪುರುಷರು ಶೇ 48 ರಷ್ಟು ಮಹಿಳೆಯರು ವರ್ಚುವಲ್ ಡೇಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ADVERTISEMENT

ಭಾರತದಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಗಳು ನಡೆಯುತ್ತಿವೆ. ಅಲ್ಲದೇ ಪುರುಷ ಪ್ರಧಾನ ವ್ಯವಸ್ಥೆಯಿಂದ ಮುಕ್ತ ಡೇಟಿಂಗ್ ಅವಕಾಶಗಳು ಯುವಕ ಯುವತಿಯರಿಗೆ ಅಷ್ಟೊಂದು ಒದಗಿ ಬರುವುದಿಲ್ಲ. ಇದರಿಂದ ಬಹಳಷ್ಟು ಪ್ರಮಾಣದಲ್ಲಿ ಜನ ವರ್ಚುವಲ್ ಡೇಟಿಂಗ್ ಮೊರೆ ಹೋಗಿದ್ದಾರೆ ಎಂದು ವರದಿ ಹೇಳಿದೆ.

ವರ್ಚುವಲ್ ಡೇಟಿಂಗ್ ಬಳಕೆದಾರರಿಗೆ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿವೆ ಎಂದು ವರದಿ ಹೇಳಿದೆ. ಸಾಂಪ್ರದಾಯಿಕ ಡೇಟಿಂಗ್ ನಡೆಸಲು ಹಿಂಜರಿಯುವವರು ವರ್ಚುವಲ್‌ ಡೇಟಿಂಗ್‌ನಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅದಾಗ್ಯೂ ಕೂಡ ವರ್ಚುವಲ್ ಡೇಟಿಂಗ್ ಎನ್ನುವುದು ಭಾರತದಲ್ಲಿ ಇನ್ನೂ ಕೂಡ ಆರಂಭಿಕ ಹಂತದಲ್ಲಿದೆ ಎಂದು ಎಫ್‌ಐಎಸ್ ಸಂಸ್ಥೆ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.