ADVERTISEMENT

ನಿರ್ಲಕ್ಷ್ಯದಿಂದಲೇ ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ

Zuckerberg

ಏಜೆನ್ಸೀಸ್
Published 27 ಜೂನ್ 2019, 19:45 IST
Last Updated 27 ಜೂನ್ 2019, 19:45 IST
   

ಸ್ಯಾನ್‌ಫ್ರಾನ್ಸಿಸ್ಕೊ(ಎಎಫ್‌ಪಿ): ರಾಜಕೀಯಕ್ಕೆ ಸಂಬಂಧಿಸಿದ ನಕಲಿ ಮಾಹಿತಿಯನ್ನು ನಿಯಂತ್ರಿಸಲು ಅಮೆರಿಕ ಅಧಿಕಾರಿಗಳು ಸಾಕಷ್ಟು ಕ್ರಮ ಕೈಗೊಳ್ಳದೇ ಇದ್ದುದರಿಂದ 2016ರ ಅಮೆರಿಕ ಚುನಾವಣೆ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿಗಳ ಮಹಾಪೂರವೇ ಹರಿದುಬರುವಂತಾಯಿತು ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ.

‘ಒಂದು ಖಾಸಗಿ ಕಂಪನಿಯಾಗಿದ್ದುಕೊಂಡು ರಷ್ಯನ್‌ ಸರ್ಕಾರದ ನಡೆಯನ್ನು ನಿಯಂತ್ರಿಸುವ ಅಧಿಕಾರ ಹೊಂದಿಲ್ಲ. ಆದರೆ ಸರ್ಕಾರವು ರಷ್ಯಾದ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಹೊಂದಿದೆ’ ಎಂದು ಬುಧವಾರ ಕೊಲರೆಡೊದಲ್ಲಿ ನಡೆದ ಆಸ್ಪೆನ್‌ ಐಡಿಯಾಸ್‌ ಫೆಸ್ಟಿವಲ್‌ ನಲ್ಲಿ ನಡೆದ ಸಂದರ್ಶನದಲ್ಲಿ ಅವರು ಹೇಳಿದರು.

’ಖಾಸಗಿ ಡೇಟಾ ಮತ್ತು ರಾಜಕೀಯ ಜಾಹೀರಾತುಗಳನ್ನು ಸರ್ಕಾರಗಳೇ ನಿಯಂತ್ರಿಸಬೇಕು. ಅಮೆರಿಕ ಚುನಾವಣೆಯಲ್ಲಿ ಅಧಿಕಾರಿಗಳು ಹಸ್ತಕ್ಷೇಪ ನಡೆಸುವುದನ್ನು ತಡೆಗಟ್ಟಲು ಪ್ರಯತ್ನಿಸಬೇಕು‘ ಎಂಬುದು ಅವರ ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.