ವಾಷಿಂಗ್ಟನ್: ಅಮೆರಿಕದ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮ ಲಿಂಗದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಉದ್ಯಮ ದಿಗ್ಗಜ ಎಲಾನ್ ಮಸ್ಕ್ ತಂದೆ ಎರಾಲ್ ಮಸ್ಕ್, ‘ಮಿಚೆಲ್ ಹೆಣ್ಣಿನ ಉಡುಗೆ ತೊಟ್ಟಿರುವ ಗಂಡು’ ಎಂದು ಹೇಳಿದ್ದಾರೆ.
ಮಿಚೆಲ್ ಅವರ ಪತಿ, ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಒಬ್ಬ ‘ಕ್ವಿಯರ್’ ಎಂದೂ ಅವರು ಆರೋಪಿಸಿದ್ದಾರೆ.
ಜೋಶುವಾ ರುಬಿನ್ ಅವರ ‘ವೈಡ್ ಅವೇಕ್ ಪಾಡ್‌ಕ್ಯಾಸ್ಟ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಈ ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಆರೋಪಗಳನ್ನು ಮಾಡುವುದರಲ್ಲಿ ಎರಾಲ್ ಹೆಸರುವಾಸಿಯಾಗಿದ್ದಾರೆ.
‘ಬರಾಕ್ ಒಬಾಮ ಒಬ್ಬ ‘ಕ್ವಿಯರ್’ ಆಗಿದ್ದು, ಹೆಣ್ಣಿನ ಉಡುಗೆ ತೊಟ್ಟಿರುವ ಗಂಡನ್ನು ಮದುವೆಯಾಗಿದ್ದಾರೆ. ಇದರ ಬಗ್ಗೆ ನಮಗೆಲ್ಲ ತಿಳಿದಿದೆ. ಇದು ಸಾಮಾನ್ಯ ಜ್ಞಾನ’ ಎಂದು ಹೇಳಿದ್ದಾರೆ.
‘ಈ ಹಿಂದೆ ಕಾಮಿಡಿಯನ್ ಜಾನ್ ರಿವರ್ಸ್ ಅವರು ಇದನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದರು. ಆದರೆ ಹೇಳಿಕೆ ನೀಡಿದ ಎರಡು ವಾರಗಳ ನಂತರ ಆಕೆ ತೀರಿಕೊಂಡರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದಿದ್ದಾರೆ.
‘ಮಿಚೆಲ್ ಹೆಣ್ಣಲ್ಲ, ಗಂಡು ಎಂಬುವುದು ನಿಸ್ಸಂಶಯ. ಅವರ ಟ್ಯ್ರಾಕ್‌ಸೂಟ್ ಹಾಕಿಕೊಂಡಿರುವ ಚಿತ್ರಗಳನ್ನು ಗಮನಿಸಿದರೆ ನಿಮಗಿದು ತಿಳಿಯುತ್ತದೆ’ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.
2014ರಲ್ಲಿ ಜಾನ್ ರಿವರ್ಸ್ ಅವರು ಮಿಚೆಲ್ ಒಬಾಮಾ ಅವರ ಲಿಂಗದ ಕುರಿತು ತಮಾಷೆ ಮಾಡಿದ್ದರು. ಅಲ್ಲದೇ ಒಬಾಮ ಒಬ್ಬ ಸಲಿಂಗಕಾಮಿ ಎಂದೂ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.