ADVERTISEMENT

VIDEO: ಪತ್ರಕರ್ತೆಗೆ ಕಣ್ಸನ್ನೆ ಮಾಡಿದ ಪಾಕ್ ಸೇನಾ ವಕ್ತಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 7:26 IST
Last Updated 10 ಡಿಸೆಂಬರ್ 2025, 7:26 IST
<div class="paragraphs"><p>'ಎಕ್ಸ್' ಚಿತ್ರ (ಸ್ಕ್ರೀನ್‌ಶಾಟ್)</p></div>

'ಎಕ್ಸ್' ಚಿತ್ರ (ಸ್ಕ್ರೀನ್‌ಶಾಟ್)

   

ಕರಾಚಿ: ಪತ್ರಕರ್ತೆಗೆ ಕಣ್ಸನ್ನೆ ಮಾಡುವ ಮೂಲಕ ಪಾಕಿಸ್ತಾನದ ಸೇನಾ ವಕ್ತಾರ ಪೇಚಿಗೆ ಸಿಲುಕಿದ್ದಾರೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಷ್ ರಿಲೇಷನ್ಸ್‌ನ (ಐಎಸ್‌ಪಿಆರ್) ಡೈರೆಕ್ಟರ್ ಜನರಲ್ ಆಗಿರುವ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ, ಸುದ್ದಿಗೋಷ್ಠಿಯ ವೇಳೆ ಪತ್ರಕರ್ತೆಯೊಬ್ಬರ ಕಡೆಗೆ ಕಣ್ಸನ್ನೆ ಮಾಡಿದ್ದಾರೆ.

ADVERTISEMENT

ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪಾಕ್ ಸೇನಾ ವಕ್ತಾರನ ನಡೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಂಬಂಧಪಟ್ಟಂತೆ ಪತ್ರಕರ್ತೆಯ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಪಾಕ್ ಸೇನಾ ವಕ್ತಾರ ಈ ರೀತಿಯಾಗಿ ವರ್ತಿಸಿದ್ದಾರೆ.

ಪಾಕ್ ಸೇನಾ ವಕ್ತಾರನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದ್ದು, ಆತ 'ವೃತಿಪರ ಯೋಧ ಅಲ್ಲ' ಎಂದು ಖಂಡಿಸಿದ್ದಾರೆ.

'ಸೇನಾ ಸಮವಸ್ತ್ರ ಧರಿಸಿ ಈ ರೀತಿಯಾಗಿ ವರ್ತಿಸಲು ಹೇಗೆ ಸಾಧ್ಯ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.