ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ‘Rs 8.28’: ಅಸಲಿಗೆ ಏನಿದು?

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 7:31 IST
Last Updated 20 ಜೂನ್ 2020, 7:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು:ಕಳೆದ 14 ದಿನಗಳಿಂದ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರುತ್ತಿದೆ. ಈ ವಿಚಾರ ಈಗ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಮೇಲೆ ₹7.62 ಹೆಚ್ಚಳವಾಗಿದೆ. ಇನ್ನು ಡೀಸೆಲ್‌ ₹8.28 ಹೆಚ್ಚಳವಾಗಿದೆ. ಈ ವಿಷಯದ ಮೇಲೆ ಟ್ವಿಟರ್‌ ಬಳಕೆದಾರರು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ, ಮೀಮ್‌ಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ನವದೆಹಲಿಯಲ್ಲಿ ಶನಿವಾರವೂ ಪೆಟ್ರೋಲ್‌ ದರ ಲೀಟರ್‌ ಮೇಲೆ 51 ಪೈಸೆ ಏರಿಕೆಯಾಗಿದೆ. ಡೀಸೆಲ್‌ 61 ಪೈಸೆ ಏರಿದೆ. ಈಗ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹78.88 ಆಗಿದ್ದರೆ, ಡೀಸೆಲ್‌ ₹77.67 ಆಗಿದೆ.

ADVERTISEMENT

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 57 ಪೈಸೆ ಏರಿದ್ದು ₹81.44 ಆಗಿದೆ. ಡೀಸೆಲ್‌ ಬೆಲೆ 62 ಪೈಸೆ ಏರಿಕೆಯಾಗಿದ್ದು, ₹73.86 ಆಗಿದೆ.

ಇಂಧನ ದರ ಏರಿಕೆ ಕುರಿತು ಸ್ವಾರಸ್ಯಕರ ಚರ್ಚೆಗಳು ಇಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.