ADVERTISEMENT

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಬೇಡ ಎಂದ ಟ್ವೀಟಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2020, 13:32 IST
Last Updated 12 ಜೂನ್ 2020, 13:32 IST
ಮೀಮ್ ( ಕೃಪೆ ಟ್ವಿಟರ್)
ಮೀಮ್ ( ಕೃಪೆ ಟ್ವಿಟರ್)   

ಬೆಂಗಳೂರು: ದೇಶದಾದ್ಯಂತ ಹೆಚ್ಚಿನ ಶಾಲಾ ಕಾಲೇಜುಗಳು ಆನ್‌ಲೈನ್ ತರಗತಿ ಆರಂಭಿಸಿವೆ. ಆದರೆಆನ್‌ಲೈನ್ ತರಗತಿಯಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವುದಕ್ಕಿಂತ ಹಾನಿಯೇ ಹೆಚ್ಚುಎಂದು ಹಲವಾರು ನೆಟ್ಟಿಗರು ವಾದಿಸಿದ್ದುಶುಕ್ರವಾರ ಸಂಜೆ ಟ್ವಿಟರ್‌ನಲ್ಲಿ #StopOnlineClass ಟ್ರೆಂಡ್ ಆಗಿದೆ.

ಸ್ಮಾರ್ಟ್‌ಫೋನ್, ಟಿವಿ ಇಲ್ಲದಿರುವ ಕಾರಣ ಆನ್‌ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಕೇರಳದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿದ್ದಳು. ಈ ಸುದ್ದಿಯನ್ನು ಉಲ್ಲೇಖಿಸಿರುವ ನೆಟ್ಟಿಗರು ಆನ್‌ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಇದು ಹೊರೆಯಾಗಲಿದೆ. ಎಲ್ಲರ ಬಳಿ ಸ್ಮಾರ್ಟ್‌ಫೋನ್, ಇಂಟರ್ನೆಟ್ ಸೌಕರ್ಯ ಇರುವುದಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬೇಡಿ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಆನ್‌ಲೈನ್ ಕ್ಲಾಸಿನಿಂದ ಕಣ್ಣಿಗೆ ಹಾನಿಯಾಗುತ್ತಿದೆ. ಹಾಗಾಗಿ ಆನ್‌ಲೈನ್ ತರಗತಿ ಬೇಡ ಎಂದು ಟ್ವೀಟಿಸಿದ್ದಾರೆ.

ADVERTISEMENT

ಅದೇ ವೇಳೆ ಇಡೀ ದಿನ ಆನ್‌ಲೈನ್ ಕ್ಲಾಸ್ ಇರುವುದಿಲ್ಲ, ಬರೀ ಎರಡುಗಂಟೆಗಳ ಆನ್‌ಲೈನ್ ಇರುತ್ತದೆ. ಹೀಗಿರುವಾಗ ಆನ್‌ಲೈನ್ ಕ್ಲಾಸ್ ಬೇಡ ಎಂದು ಹೇಳುವುದು ಯಾಕೆ ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.