ADVERTISEMENT

ಗೌಪ್ಯತಾ ನೀತಿ; ಕೇಂದ್ರ ಹಾಗೂ ವಾಟ್ಸ್‌ಆ್ಯಪ್‌ಗೆ ಸುಪ್ರೀಂ ನೋಟಿಸ್ ಜಾರಿ

ಪಿಟಿಐ
Published 15 ಫೆಬ್ರುವರಿ 2021, 7:14 IST
Last Updated 15 ಫೆಬ್ರುವರಿ 2021, 7:14 IST
ವ್ಯಾಟ್ಸ್‌ಆ್ಯಪ್ ಮೆಸೇಜಿಂಗ್ ಆ್ಯಪ್
ವ್ಯಾಟ್ಸ್‌ಆ್ಯಪ್ ಮೆಸೇಜಿಂಗ್ ಆ್ಯಪ್   

ನವದಹೆಲಿ:ಭಾರತದಲ್ಲಿ ಗೌಪ್ಯತಾ ನೀತಿ ಪರಿಷ್ಕರಣೆ ಸಂಬಂಧ ಮೆಸೇಜಿಂಗ್ ಫ್ಲ್ಯಾಟ್‌ಫಾರ್ಮ್ ವಾಟ್ಸ್‌ಆ್ಯಪ್ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಯುರೋಪ್‌ಗೆ ಹೋಲಿಸಿದಾಗವಾಟ್ಸ್‌ಆ್ಯಪ್ ಭಾರತದಲ್ಲಿಕಳಪೆ ಗೌಪ್ಯತಾ ಗುಣಮಟ್ಟವನ್ನು ಹೊಂದಿದೆ. ಈ ಸಂಬಂಧ ಅರ್ಜಿಯ ವಿಚಾರಣೆನಡೆಸುತ್ತಿರುವ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರದೊಳಗೆ ಉತ್ತರಿಸುವಂತೆಆದೇಶಿಸಿದೆ.

ವಾಟ್ಸ್‌ಆ್ಯಪ್ ಕಂಪನಿ ಹೊಂದಿರುವ ಟ್ರಿಲಿಯನ್ ಗಟ್ಟಲೆ ಮೌಲ್ಯಕ್ಕಿಂತಲೂ ಮಿಗಿಲಾಗಿ ಜನರು ತಮ್ಮ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ADVERTISEMENT

ಖಾಸಗಿತನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಭೀತಿ ಜನರಲ್ಲಿದೆ. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದೆ.

ಯುರೋಪ್‌ನಲ್ಲಿ ವಿಶೇಷ ಗೌಪ್ಯತಾ ನೀತಿಯನ್ನು ಹೊಂದಿದ್ದೇವೆ. ಭಾರತವು ಇದಕ್ಕೆ ಸಮಾನವಾದನೀತಿಯನ್ನು ಹೊಂದಲುಬಯಸುವುದಾದರೆಅನುಸರಿಸಲಾಗುವುದು ಎಂದು ವಾಟ್ಸ್‌ಆ್ಯಪ್ಉತ್ತರಿಸಿದೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಹೊಸ ಗೌಪ್ಯತಾ ನೀತಿಗಳು ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಲಿದೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.