ADVERTISEMENT

ಚೀನಾ ಆ್ಯಪ್‌ಗಳಿಗೆ ನಿಷೇಧ: ಟ್ವಿಟರ್‌ನಲ್ಲಿ ಟ್ರೆಂಡ್ ಆದ #TikTok

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 16:51 IST
Last Updated 29 ಜೂನ್ 2020, 16:51 IST
   

ಟಿಕ್‌ ಟಾಕ್, ಶೇರ್ ಇಟ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ 59 ಚೀನಾ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ ಟ್ವಿಟರ್‌ನಲ್ಲಿ ಟಿಕ್‌ಟಾಕ್‌ ಹ್ಯಾಷ್‌ ಟ್ಯಾಗ್ ಟ್ರೆಂಡ್‌ ಆಗಿದೆ.

ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದ ಬಳಿಕ ಚೀನಾ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕೂಗು ಎದ್ದಿತ್ತು.

ಇದೀಗ,ದೇಶದ ಕೋಟ್ಯಂತರ ಅಂತರ್ಜಾಲ ಮತ್ತು ಮೊಬೈಲ್ ಬಳಕೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತು ಸೈಬರ್‌ಸ್ಪೇಸ್‌ ಸಾರ್ವಭೌಮತ್ವದ ಸುರಕ್ಷತೆಯ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಸಚಿವಾಲಯಈ ನಿರ್ಧಾರ ಕೈಗೊಂಡಿದೆ.

ADVERTISEMENT

ಸರ್ಕಾರದ ಈ ಕ್ರಮಕ್ಕೆ ಸಂಬಂಧಿಸಿದಂತೆಟ್ವಿಟರ್‌ನಲ್ಲಿಸಾಕಷ್ಟು ಹಾಸ್ಯಭರಿತ ಟ್ವೀಟ್‌ಗಳು ಹರಿದಾಡಿವೆ. ಅದರೊಟ್ಟಿಗೆ ಹಲವರು ಬೆಂಬಲವನ್ನೂ ಸೂಚಿಸಿದ್ದಾರೆ.

ವ್ಯಕ್ತಿಯೊಬ್ಬರು, ‘ಟಿಕ್‌ಟಾಕ್‌ ಬ್ಯಾನ್‌ ಆಗಿದೆ. ಅತ್ಯಂತ ಅಗತ್ಯವಾಗಿದ್ದ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಶೇರ್‌ಚಾಟ್‌ ಮತ್ತು ಕ್ಯಾಮ್‌ಸ್ಕ್ಯಾನರ್‌ ಸೇರಿ 59 ಆ್ಯಪ್‌ಗಳನ್ನು ಬ್ಯಾನ್‌ ಮಾಡಲಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಆಲಿಯಾ ಭಟ್‌ ಅಳುತ್ತಿರುವ ಚಿತ್ರವೊಂದನ್ನು ಹಂಚಿಕೊಂಡಿರುವ ಮತ್ತೊಬ್ಬರು, ‘ಟಿಕ್‌ಟಾಕ್‌ನಿಂದಾಗಿ ತಮ್ಮನ್ನು ತಾವು ಸೆಲೆಬ್ರಿಟಿಗಳೆಂದು ಯಾರೆಲ್ಲ ಭಾವಿಸಿದ್ದರೋ ಅವರಪ್ರತಿಕ್ರಿಯೆ ಹೀಗಿರಲಿದೆ’ ಎಂದು ಬರೆದುಕೊಂಡಿದ್ದಾರೆ.

‘ತುಂಬಾ ತಡವಾಗುವ ಮುನ್ನಬ್ಯಾನ್‌ ಆಗಿರುವ ಆ್ಯಪ್‌ಗಳಲ್ಲಿನ ನಿಮ್ಮ ಡಾಟಾ ಸೇವ್‌ ಮಾಡಿಕೊಳ್ಳಿ’ ಮತ್ತೊಬ್ಬರುಸಲಹೆ ನೀಡಿದ್ದಾರೆ.

ಇನ್ನಷ್ಟು ಹಾಸ್ಯಮಯ ಟ್ವೀಟ್‌ಗಳು ಇಲ್ಲಿವೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.