ADVERTISEMENT

ಅಮೆರಿಕದಲ್ಲಿ ಮಕ್ಕಳ ರಕ್ಷಣೆ ಒಪ್ಪಂದ ಉಲ್ಲಂಘಿಸಿದ ಟಿಕ್‌ಟಾಕ್: ದೂರು ದಾಖಲು

ಏಜೆನ್ಸೀಸ್
Published 15 ಮೇ 2020, 6:47 IST
Last Updated 15 ಮೇ 2020, 6:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಮಕ್ಕಳ ಮಾಹಿತಿ ಸಂಗ್ರಹಕ್ಕೆ ನಿರ್ಬಂಧ ವಿಧಿಸಿ ಕಳೆದ ವರ್ಷ ಮಾಡಿಕೊಂಡಿದ್ದ ಒಪ್ಪಂದವನ್ನು ಟಿಕ್‌ಟಾಕ್‌ ಉಲ್ಲಂಘಿಸಿದೆ ಎಂದು ಅಮೆರಿಕದ ಗ್ರಾಹಕರ ಒಕ್ಕೂಟ ದೂರು ನೀಡಿದೆ.

13 ವರ್ಷ ವಯಸ್ಸಿಗಿಂತಲೂ ಕೆಳಗಿನ ಮಕ್ಕಳ ಮಾಹಿತಿಯನ್ನು ಒಪ್ಪಂದಕ್ಕೆ ವಿರುದ್ಧವಾಗಿ ಟಿಕ್‌ಟಾಕ್ ಸಂಗ್ರಹಿಸುತ್ತಿದೆ ಎಂದು 20 ಸಂಘಟನೆಗಳನ್ನು ಒಳಗೊಂಡ ಒಕ್ಕೂಟ ಫೆಡರಲ್ ಟ್ರೇಡ್ ಕಮಿಷನ್‌ಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.

ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ತಕ್ಷಣವೇ ಈ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ADVERTISEMENT

13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪಾಲಕರ ಅನುಮತಿ ಇಲ್ಲದೆ ಟಿಕ್‌ಟಾಕ್‌ ಬಳಸುವುದನ್ನು ಚೀನಾದ ಬೈಟ್‌ಡ್ಯಾನ್ಸ್‌ ಸುಲಭ ಮಾಡಿಕೊಟ್ಟಿದೆ. ಮಕ್ಕಳು ಬಳಸುತ್ತಿರುವ ಬಗ್ಗೆ ಪಾಲಕರಿಗೆ ನೋಟಿಫಿಕೇಶನ್ ಸಹ ಕಳುಹಿಸಲಾಗುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.