ADVERTISEMENT

ನಾಯಕರ ವಿರುದ್ಧ ಕ್ರಮ: ಟ್ವಿಟರ್ ಸಮೀಕ್ಷೆ

ಪಿಟಿಐ
Published 19 ಮಾರ್ಚ್ 2021, 16:11 IST
Last Updated 19 ಮಾರ್ಚ್ 2021, 16:11 IST
ಟ್ವಿಟರ್ ಪ್ರಾತಿನಿಧಿಕ ಚಿತ್ರ 
ಟ್ವಿಟರ್ ಪ್ರಾತಿನಿಧಿಕ ಚಿತ್ರ    

ನವದೆಹಲಿ: ಜನಸಾಮಾನ್ಯರಿಗೆ ತಾನು ರೂಪಿಸಿರುವ ನಿಯಮಗಳನ್ನು ಜಾಗತಿಕ ನಾಯಕರಿಗೂ ಅನ್ವಯಿಸಬೇಕೇ, ಅವರು ನಿಯಮಗಳನ್ನು ಉಲ್ಲಂಘಿಸಿದರೆ ತಾನು ಯಾವ ಬಗೆಯ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಟ್ವಿಟರ್ ಸಾರ್ವಜನಿಕರಿಂದ ಅಭಿಪ್ರಾಯ ಕೋರಿದೆ.

ಸಾರ್ವಜನಿಕ ವಾಗ್ವಾದಗಳ ಆರೋಗ್ಯವನ್ನು ಕಾಪಾಡುವ ಬಯಕೆ ತನಗಿದೆ, ತನ್ನ ಮೂಲಕ ನಡೆಯುವ ರಾಜಕೀಯ ಚರ್ಚೆಗಳ ಸ್ವರೂಪ ಬದಲಾಗುತ್ತಿರುವ ಕಾರಣ ಜಾಗತಿಕ ನಾಯಕರ ವಿಚಾರದಲ್ಲಿ ತನ್ನ ನೀತಿಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ.

ಈ ವಿಚಾರದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ತಿಳಿಯಲು ಟ್ವಿಟರ್ ಸಮೀಕ್ಷೆಯೊಂದನ್ನು ಕೈಗೆತ್ತಿಕೊಂಡಿದೆ. ಈ ಸಮೀಕ್ಷೆಯು ಏಪ್ರಿಲ್ 12ರವರೆಗೆ ನಡೆಯಲಿದೆ. ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 14 ಭಾಷೆಗಳಲ್ಲಿ ಪ್ರಶ್ನಾವಳಿ ಲಭ್ಯವಿರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.