ADVERTISEMENT

ಆದಾಯ ದ್ವಿಗುಣ ಮತ್ತು ಬಳಕೆದಾರರ ಹೆಚ್ಚಳಕ್ಕೆ ಟ್ವಿಟರ್ ಪ್ಲ್ಯಾನ್

ರಾಯಿಟರ್ಸ್
Published 26 ಫೆಬ್ರುವರಿ 2021, 5:49 IST
Last Updated 26 ಫೆಬ್ರುವರಿ 2021, 5:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

2023ರ ವೇಳೆಗೆ 315 ಬಿಲಿಯನ್ ಬಳಕೆದಾರರನ್ನು ಹೊಂದುವುದು ಮತ್ತು $7.5 ಬಿಲಿಯನ್ ವಾರ್ಷಿಕ ಆದಾಯ ಪಡೆಯುವ ಗುರಿ ಹೊಂದಿದ್ದೇವೆ ಎಂದು ಟ್ವಿಟರ್ ಹೇಳಿದೆ.

ಹೂಡಿಕೆದಾರರ ಕಾರ್ಯಕ್ರಮಕ್ಕೂ ಮೊದಲು ಗುರುವಾರ ವಿವರ ನೀಡಿರುವ ಟ್ವಿಟರ್, ಹೊಸ ಫೀಚರ್‌ಗಳನ್ನು ಒದಗಿಸುವ ಮೂಲಕ ಬಳಕೆದಾರರ ಸಂಖ್ಯೆ ವೃದ್ಧಿ ಮತ್ತು ಆದಾಯ ಹೆಚ್ಚಿಸುವುದು ನೂತನ ಯೋಜನೆಯಾಗಿದೆ ಎಂದು ಪ್ರಕಟಿಸಿದೆ.

ಫೇಸ್‌ಬುಕ್ ಮತ್ತು ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಹಾಗೂ ಇತರ ಕೆಲವೊಂದು ಆ್ಯಪ್, ಸಾಮಾಜಿಕ ತಾಣಗಳ ಸ್ಪರ್ಧೆಯಿಂದಾಗಿ ಟ್ವಿಟರ್ ಹೆಚ್ಚಿನ ಸಮಸ್ಯೆ ಎದುರಿಸಿದೆ. ಆದರೆ ಇತ್ತೀಚೆಗೆ ಆಡಿಯೋ ಚಾಟ್, ಸ್ಟೋರೀಸ್ ಫೀಚರ್‌ಗಳನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಹೊಸತನ್ನು ಪರಿಚಯಿಸಿದೆ.

ADVERTISEMENT

ಮುಂದಿನ ಎರಡು ವರ್ಷಗಳಲ್ಲಿ ದೈನಂದಿನ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಮತ್ತು ಆದಾಯ ವೃದ್ಧಿಗೆ ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ. ನಾವು ಸ್ವಲ್ಪ ಹಿಂದಿದ್ದೇವೆ ಎಂದು ನಮಗೆ ತಿಳಿದಿದೆ ಎಂದು ಟ್ವಿಟರ್ ಸಿಇಒ ಜಾಕ್ ಡೋರ್ಸಿ ಟ್ವಿಟರ್ ವರ್ಚುವಲ್ ಇನ್ವೆಸ್ಟರ್ ಡೇಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.