ADVERTISEMENT

ಇಲಾನ್ ಮಸ್ಕ್‌ ವಿರುದ್ಧ ಬರೆದ ಪತ್ರಕರ್ತರ ಖಾತೆ ರದ್ದು ಮಾಡಿದ ಟ್ವಿಟರ್‌

ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ‍ಪೋಸ್ಟ್‌ ಮುಂತಾದ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಖಾತೆ ಅಮಾನತು

ರಾಯಿಟರ್ಸ್
Published 16 ಡಿಸೆಂಬರ್ 2022, 4:33 IST
Last Updated 16 ಡಿಸೆಂಬರ್ 2022, 4:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸ್ಯಾನ್‌ಫ್ರಾನ್ಸಿಸ್ಕೋ:ಇಲಾನ್‌ ಮಸ್ಕ್ ವಿರುದ್ಧ ವರದಿ ಪ್ರಕಟ ಮಾಡಿದ ಪತ್ರಕರ್ತರ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.

ನ್ಯೂಯಾರ್ಕ್ ಟೈಮ್ಸ್‌, ವಾಷಿಂಗ್ಟನ್ ಪೋಸ್ಟ್‌, ಟೈಮ್ಸ್, ಸಿಎನ್‌ಎನ್‌ ಮುಂತಾದ ಮಾಧ್ಯಮ ಸಂಸ್ಥೆಗಳ ಪತ್ರಕರ್ತರದ್ದೂ ಸೇರಿ ಹಲವು ಪತ್ರಕರ್ತರ ಖಾತೆಯನ್ನು ಟ್ವಿಟರ್‌ ಅಮಾನತು ಮಾಡಿದೆ.

ಯಾರದ್ದೆಲ್ಲಾ ಖಾತೆ ಅಮಾನತು ಆಗಿದೆ, ಯಾವ ಕಾರಣಕ್ಕೆ ಅಮಾನತು ಮಾಡಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ADVERTISEMENT

ಪತ್ರಕರ್ತರ ಖಾತೆ ಅಮಾನತು ಬಗ್ಗೆ ಬಳಕೆದಾರರೊಬ್ಬರ ಪ್ರಶ್ನೆಗೆ ಮಸ್ಕ್ ಉತ್ತರಿಸಿದ್ದು, ‘ಡಾಕ್ಸಿಂಗ್‌ (ವೈಯಕ್ತಿಕ ಮಾಹಿತಿ ಹಂಚಿಕೆ ಮಾಡುವುದರ ವಿರುದ್ಧ ಇರುವ ನಿಯಮ) ನಿಯಮ ಪತ್ರಕರ್ತರೂ ಸಹಿತ ಎಲ್ಲರಿಗೂ ಅನ್ವಯವಾಗಲಿದೆ. ಇಡೀ ದಿನ ನನ್ನ ಬಗ್ಗೆ ಟೀಕೆ ಮಾಡುವುದು ಸರಿ. ನಾನು ಇರುವ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಹಾಗೂ ನನ್ನ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸುವ ಮಾಹಿತಿ ನೀಡುವುದನ್ನು ಒಪ್ಪುವುದಿಲ್ಲ‘ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ಬಯಸಿ ಟ್ವಿಟರ್‌ ಅನ್ನು ರಾಯಿಟರ್ಸ್‌ ಸಂಪರ್ಕಮಾಡಿದರೂ ಸ್ಪಷ್ಟ ಉತ್ತರ ಲಭಿಸಿಲ್ಲ.

ಟೈಮ್ಸ್‌ ವರದಿಗಾರ ರಯಾನ್‌ ಮ್ಯಾಕ್‌ (@rmac18), ಪೋಸ್ಟ್‌ ಸಂಸ್ಥೆಯ ವರದಿಗಾರ ಡ್ರ್ಯೂ ಹಾರ್ವೆಲ್‌ (@drewharwell), ಸಿಎನ್ಎನ್‌ ನ ವರದಿಗಾರ ಡೋನಿ ಓ ಸುಲ್ಲಿವನ್ (@donie) ಹಾಗೂ ಮಶಾಬ್ಲೆಯ ವರದಿಗಾರ ಮ್ಯಾಟ್‌ ಬಿಂರ್ (@MattBinder) ಮುಂತಾದವರ ಖಾತೆ ಅಮಾನತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.