ADVERTISEMENT

ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನಿಯಮ ಜಾರಿ: ಮೇ 15ಕ್ಕೆ ಮುಂದೂಡಿದ ವಾಟ್ಸ್ಆ್ಯಪ್‌

ಪಿಟಿಐ
Published 16 ಜನವರಿ 2021, 10:32 IST
Last Updated 16 ಜನವರಿ 2021, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಟ್ಸ್‌ಆ್ಯಪ್‌ನ ಖಾಸಗೀತನಕ್ಕೆ ಸಂಬಂಧಿಸಿದ ಹೊಸ ನಿಯಮಕ್ಕೆ ಜಗತ್ತಿನೆಲ್ಲೆಡೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ, ಅದನ್ನು ಜಾರಿಗೊಳಿಸುವ ದಿನಾಂಕವನ್ನು ಮೇ 15ಕ್ಕೆ ಮುಂದೂಡಲಾಗಿದೆ.

ಈ ಮೊದಲು ಕಂಪನಿ ನೀಡಿದ್ದ ಸೂಚನೆಯ ಪ್ರಕಾರ, ಫೆಬ್ರುವರಿ 8ರ ಒಳಗಾಗಿ ಹೊಸ ನಿಯಮಕ್ಕೆ ಒಪ್ಪಿಗೆ ನೀಡದೇ ಹೋದರೆ ಆ ಬಳಿಕ ಫೇಸ್‌ಬುಕ್‌ ಖಾತೆ ಡಿಲೀಟ್‌ ಆಗುತ್ತಿತ್ತು. ಫೇಸ್‌ಬುಕ್‌ನೊಂದಿಗೆ ಮಾಹಿತಿ ಹಂಚಿಕೊಳ್ಳುವ ಕುರಿತು ಬಳಕೆದಾರರು ಆತಂಕಗೊಂಡಿದ್ದು, ಪ್ರಮುಖ ಉದ್ಯಮಿಗಳು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಾಟ್ಸ್ಆ್ಯಪ್‌ ಈ ನಿರ್ಧಾರ ತೆಗೆದುಕೊಂಡಿದೆ.

ಹೊಸ ನಿಯಮ ಜಾರಿಗೊಳಿಸುವ ದಿನಾಂಕವನ್ನು ಮುಂದೂಡಿರುವ ಕುರಿತು ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದು, ಜನರಿಗೆ ಅದರ ಕುರಿತು ಪರಿಶೀಲನೆ ಮಾಡಿ ಒಪ್ಪುವಂತೆ ಹೇಳಿದೆ. ‘ಫೆಬ್ರುವರಿ 8ರಂದು ಯಾರೊಬ್ಬರ ಖಾತೆಯೂ ಅಮಾನತು ಅಥವಾ ಡಿಲೀಟ್‌ ಆಗುವುದಿಲ್ಲ. ಹೊಸ ನೀತಿ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಮೂಡಿರುವ ತಪ್ಪು ತಿಳವಳಿಕೆಗಳನ್ನು ನೀಗಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದೆ.

ADVERTISEMENT

ಖಾಸಗೀತನದ ಕುರಿತು ಆತಂಕ ವ್ಯಕ್ತಪಡಿಸಿರುವ ಹಲವು ಬಳಕೆದಾರರು ವಾಟ್ಸ್‌ಆ್ಯಪ್‌ನ ಪ್ರತಿಸ್ಪರ್ಧಿಗಳಾದ ಸಿಗ್ನಲ್‌ ಮತ್ತು ಟೆಲಿಗ್ರಾಂ ಬಳಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.