ADVERTISEMENT

ಯೂಟ್ಯೂಬ್‌ನಲ್ಲಿ ವರ್ಷಕ್ಕೆ ₹ 184 ಕೋಟಿ ಗಳಿಸುತ್ತಿರುವ 8 ವರ್ಷದ ಪುಟಾಣಿ!

ಏಜೆನ್ಸೀಸ್
Published 19 ಡಿಸೆಂಬರ್ 2019, 10:09 IST
Last Updated 19 ಡಿಸೆಂಬರ್ 2019, 10:09 IST
'ರಯಾನ್ಸ್‌ ವರ್ಡ್‌'ನ ರಯಾನ್‌
'ರಯಾನ್ಸ್‌ ವರ್ಡ್‌'ನ ರಯಾನ್‌   

ಗೊಂಬೆಗಳು, ಆಟಿಕೆಗಳ ವಿಮರ್ಶೆ ನಡೆಸುವ ಎಂಟು ವರ್ಷ ವಯಸ್ಸಿನ ಬಾಲಕ ಯೂಟ್ಯೂಬ್‌ನಿಂದ ಅತಿ ಹೆಚ್ಚು ಗಳಿಸುತ್ತಿರುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾನೆ. ಈ ಹುಡುಗ 2019ರಲ್ಲಿ ₹ 184.72 ಕೋಟಿ (26 ಮಿಲಿಯನ್‌ ಡಾಲರ್‌) ಗಳಿಸಿದ್ದಾನೆ.

ಸತತ ಎರಡನೇ ವರ್ಷ ಪುಟಾಣಿ ರಿಯಾನ್‌ ಅತಿ ಹೆಚ್ಚು ಗಳಿಕೆಯ ಯುಟ್ಯೂಬರ್‌ ಆಗಿ ಹೊರಹೊಮ್ಮಿದ್ದಾನೆ. 2018ರಲ್ಲಿ ₹ 156.54 ಕೋಟಿ (22 ಮಿಲಿಯನ್‌ ಡಾಲರ್‌) ಗಳಿಸಿದ್ದ 'ರಯಾನ್ಸ್‌ ವರ್ಡ್‌ನ' (Ryan's World) ರಯಾನ್‌, ಈ ಬಾರಿ 4 ಮಿಲಿಯನ್‌ ಡಾಲರ್‌ (₹ 28.46 ಕೋಟಿ) ಹೆಚ್ಚು ಗಳಿಸಿರುವುದಾಗಿ ಫೋರ್ಬ್ಸ್‌ ವಾರ್ಷಿಕ ಟಾಪ್‌ 10ರ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಬಾಲಕ ರಯಾನ್‌ ಹೊಸ ಆಟಿಕೆಗಳನ್ನು ಆಡುತ್ತ ಸಂಭ್ರಮಿಸುವ ಜತೆಗೆ ಅದನ್ನು ನೇರ ವಿಮರ್ಶೆಗೆಒಳಪಡಿಸುವ ಮೂಲಕ ಮಕ್ಕಳ ಯೂಟ್ಯೂಬ್‌ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾನೆ. ಮಕ್ಕಳನ್ನು ಸೆಳೆಯುವ ಗ್ರಾಫಿಕ್‌ಗಳೊಂದಿಗೆ ರಯಾನ್ಸ್‌ ವರ್ಡ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ರಯಾನ್‌ನ ವಿಡಿಯೊಗಳು ಪ್ರಕಟಗೊಳ್ಳುತ್ತಿವೆ.

ADVERTISEMENT

ಜೂನ್‌ 2018ರಿಂದ 2019ರ ಜೂನ್‌ವರೆಗಿನ ಗಳಿಕೆ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. 'ಡ್ಯೂಡ್‌ ಪರ್ಫೆಕ್ಟ್‌' (Dude Perfect) ಮತ್ತು ನಾಸ್ತ್ಯ (Nastya) ಕ್ರಮವಾಗಿ ₹ 142.31 ಕೋಟಿ (20 ಮಿಲಿಯನ್‌ ಡಾಲರ್‌) ಮತ್ತು ₹ 128 ಕೋಟಿ (18 ಮಿಲಿಯನ್‌ ಡಾಲರ್‌) ಗಳಿಕೆಯ ಮೂಲಕ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಟಾಪ್‌ 10 ಯೂಟ್ಯೂಬರ್‌ಗಳು 2019ರಲ್ಲಿ ಒಟ್ಟು ₹ 1152.71 ಕೋಟಿ (162 ಮಿಲಿಯನ್‌ ಡಾಲರ್‌) ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.