ADVERTISEMENT

ಕ್ರಿಕೆಟಿಗ ದೊಡ್ಡಗಣೇಶ್‌ ಒಡನಾಟ ನೆನೆದ ವೈ.ಎಸ್‌.ವಿ.ದತ್ತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2020, 14:41 IST
Last Updated 30 ಜೂನ್ 2020, 14:41 IST
ತಮ್ಮ ಮನೆಗೆ ಭೇಟಿ ನೀಡಿದ್ದ ದೊಡ್ಡಗಣೇಶ್ ಮತ್ತು ಅಜರುದ್ದೀನ್ ಫೋಟೊವನ್ನು ಜೆಡಿಎಸ್ ನಾಯಕ ವೈ.ಎಸ್.‌ವಿ. ದತ್ತ ಹಂಚಿಕೊಂಡಿದ್ದಾರೆ.
ತಮ್ಮ ಮನೆಗೆ ಭೇಟಿ ನೀಡಿದ್ದ ದೊಡ್ಡಗಣೇಶ್ ಮತ್ತು ಅಜರುದ್ದೀನ್ ಫೋಟೊವನ್ನು ಜೆಡಿಎಸ್ ನಾಯಕ ವೈ.ಎಸ್.‌ವಿ. ದತ್ತ ಹಂಚಿಕೊಂಡಿದ್ದಾರೆ.   

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ವೈ.ಎಸ್‌.ವಿ.ದತ್ತ ಒಡನಾಟದ ನೆನಪನ್ನು ಫೇಸ್‌ಬುಕ್ ಫೇಸ್‌ಬುಕ್‌ ಪೋಸ್ಟ್‌ನಲ್ಲಿಹಂಚಿಕೊಂಡಿದ್ದಾರೆ.

ದತ್ತ ಅವರ ಪೋಸ್ಟ್‌ ಹೀಗಿದೆ...

'ಒಂದಷ್ಟು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಹಾಗೂ ಕ್ರೆಕೆಟಿಗ ದೊಡ್ಡ ಗಣೇಶ್ ಅವರು ನಮ್ಮ ಮನೆಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿದ್ದರು.ಸುಮಾರು ನಾಲ್ಕೈದು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದ್ದನ್ನು ನಾನು ಇಂದಿಗೂ ಮರೆತಿಲ್ಲ, ಬಹಳಷ್ಟು ಜನರಿಗೆ ಗೊತ್ತಿಲ್ಲ ಅಂತ ಕಾಣುತ್ತೆ ದೊಡ್ಡ ಗಣೇಶ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಇದೇ ಅಜರುದ್ದೀನ್. ಅಜರುದ್ದೀನ್ ಬಗ್ಗೆ ಒಂದಿಷ್ಟು ಋಣಾತ್ಮಕ ಅಂಶಗಳು ಹರಿದಾಡಿದರೂ ಕನ್ನಡದ ಅಪ್ಪಟ ಗ್ರಾಮೀಣ ಪ್ರತಿಭೆ ದೊಡ್ಡ ಗಣೇಶ್ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಅಜರುದ್ದೀನ್ ಬಗ್ಗೆ ನನಗೆ ವಿಶೇಷವಾದ ಗೌರವ.

ADVERTISEMENT

'ದೊಡ್ಡ ಗಣೇಶ್ ಅವರು ರಾಜಕೀಯದಲ್ಲಿ ಬೆಳೆಯಬೇಕು ಅನ್ನೋ ಆಕಾಂಕ್ಷೆ ಇಟ್ಟುಕೊಂಡಿದ್ದರು.ಆದರೆ ರಾಜಕಾರಣದ ಒಳಸುಳಿಗಳು ಅವರಿಗೆ ಅರ್ಥ ಆಗಲಿಲ್ಲ.ರಾಜಕಾರಣದ ವ್ಯವಸ್ಥೆಯನ್ನು ನೋಡಿದ ಮೇಲೆ ಗಣೇಶರಿಗೆ ಬಹುಶಃ ಕ್ರೀಡೆಯೇ ವಾಸಿ ಅಂತ ಎನಿಸಿರಬೇಕು. ಆ ಕಾರಣಕ್ಕೇನೋ ಈಗ ರಾಜಕಾರಣದಿಂದ ದೂರ ಉಳಿದಿದ್ದಾರೆ. ಆದರೆಕ್ರೀಡೆಯಲ್ಲಿಯೂ ಇದ್ದ ಕೆಟ್ಟ ರಾಜಕಾರಣದ ವ್ಯವಸ್ಥೆಯಿಂದ ಒಳ್ಳೆಯ ಅವಕಾಶಗಳು ಗಣೇಶರಿಗೆ ಸಿಗಲಿಲ್ಲ.

'ಆದರೆ ಮುಂದಿನ ದಿನಗಳಲ್ಲಿ ದೊಡ್ಡ ಗಣೇಶ್ ಇನ್ನೂ ಎತ್ತರಕ್ಕೆ ಬೆಳೆಯಲಿದ್ದಾರೆ ಅನ್ನೋದು ನನ್ನ ಅಭಿಪ್ರಾಯ. ಅದು ರಾಜಕೀಯದಲ್ಲೋ ಅಥವಾ ಕ್ರೀಡೆಯಲ್ಲೋ ಅನ್ನೋದನ್ನು ಕಾದು ನೋಡಬೇಕು. ಆತ್ಮೀಯರಾದ ದೊಡ್ಡ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಕೋರುತ್ತೇನೆ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.