ADVERTISEMENT

ದುಬಾರಿಯಾಗಲಿದೆ ಅಮೆಜಾನ್ ಪ್ರೈಮ್ ಸದಸ್ಯತ್ವ: ಶೇ 50 ಹೆಚ್ಚಳ

ಅಮೆಜಾನ್ ಪ್ರೈಮ್ ಸದಸ್ಯತ್ವ ಶೀಘ್ರದಲ್ಲಿ ದುಬಾರಿಯಾಗಲಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2021, 9:37 IST
Last Updated 23 ನವೆಂಬರ್ 2021, 9:37 IST
ಅಮೆಜಾನ್ ಪ್ರೈಮ್ ಸದಸ್ಯತ್ವ ಶೀಘ್ರದಲ್ಲಿ ದುಬಾರಿಯಾಗಲಿದೆ..
ಅಮೆಜಾನ್ ಪ್ರೈಮ್ ಸದಸ್ಯತ್ವ ಶೀಘ್ರದಲ್ಲಿ ದುಬಾರಿಯಾಗಲಿದೆ..   

ಬೆಂಗಳೂರು: ಅಮೆಜಾನ್‌ನ ಜನಪ್ರಿಯ ಸೇವೆಗಳಲ್ಲಿ ಒಂದಾದ 'ಪ್ರೈಮ್' ಇನ್ನು ಮುಂದೆ ದುಬಾರಿಯಾಗಲಿದೆ.

ಡಿಸೆಂಬರ್‌ 13ರ ಬಳಿಕ ಅಮೆಜಾನ್ ಪ್ರೈಮ್ ಬಳಕೆದಾರರು, ವಾರ್ಷಿಕ ಸದಸ್ಯತ್ವಕ್ಕೆ ಶೇ 50 ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ.

ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಅಮೆಜಾನ್ ಮೊದಲೇ ಸೂಚನೆ ನೀಡಿತ್ತು. ಆದರೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ದರ ಪರಿಷ್ಕರಣೆ ಕುರಿತು ಎನ್‌ಡಿಟಿವಿ ಗ್ಯಾಜೆಟ್ಸ್ ವರದಿ ಪ್ರಕಟಿಸಿದೆ.

ADVERTISEMENT

ಅಮೆಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವಕ್ಕೆ ಪ್ರಸ್ತುತ ₹999 ದರವಿದೆ. ಆದರೆ ಶೇ 50 ದರ ಹೆಚ್ಚಳದ ಬಳಿಕ ₹1,499 ದರ ಆಗಲಿದೆ.

ಅಲ್ಲದೆ, ಒಂದು ತಿಂಗಳ ಪ್ಲ್ಯಾನ್ ದರ ಈಗ ₹129 ಇದ್ದು, ಮುಂದೆ ₹179 ಆಗಲಿದೆ. ಜತೆಗೆ ಮೂರು ತಿಂಗಳ ಪ್ಲ್ಯಾನ್ ದರ ₹329 ಬದಲಾಗಿ ₹459 ಇರಲಿದೆ.

ಅಮೆಜಾನ್ ಪ್ರೈಮ್ ವಿಡಿಯೊ, ಪ್ರೈಮ್ ಮ್ಯೂಸಿಕ್ ಜತೆಗೆ ಪ್ರೈಮ್ ಡೆಲಿವರಿ ಸೇವೆಗಳು ಬಳಕೆದಾರರಿಗೆ ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.