ADVERTISEMENT

23ನೇ ವರ್ಷಕ್ಕೆ ಕಾಲಿರಿಸಿದ ಗೂಗಲ್: ಡೂಡಲ್ ಮೂಲಕ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2021, 7:27 IST
Last Updated 27 ಸೆಪ್ಟೆಂಬರ್ 2021, 7:27 IST
ಜನಪ್ರಿಯ ಸರ್ಚ್ ಎಂಜಿನ್ ಗೂಗಲ್
ಜನಪ್ರಿಯ ಸರ್ಚ್ ಎಂಜಿನ್ ಗೂಗಲ್   

ಬೆಂಗಳೂರು: ಜನಪ್ರಿಯ ಸರ್ಚ್ ಎಂಜಿನ್ ಗೂಗಲ್, ಸೋಮವಾರ ಸೆ. 27ರಂದು 23ನೇ ವರ್ಷಕ್ಕೆ ಕಾಲಿರಿಸಿದೆ.

ಸೆ. 4, 1998ರಂದು ಗೂಗಲ್ ಅನ್ನು ಹುಟ್ಟುಹಾಕಲಾಯಿತಾದರೂ, ಸೆ. 27ರಿಂದ ಅಧಿಕೃತವಾಗಿ ಗೂಗಲ್ ಸರ್ಚ್ ಎಂಜಿನ್ ಕಾರ್ಯಾರಂಭ ಮಾಡಿದ್ದರಿಂದ, ಅದೇ ದಿನವನ್ನು ಗೂಗಲ್ ಹುಟ್ಟುಹಬ್ಬವನ್ನಾಗಿ ಸಂಭ್ರಮಿಸಲಾಗುತ್ತಿದೆ.

ಗೂಗಲ್ ಜನ್ಮದಿನದ ಅಂಗವಾಗಿ, ಹೋಮ್‌ ಪೇಜ್‌ನಲ್ಲಿ ಆಕರ್ಷಕ ಡೂಡಲ್ ಒಂದನ್ನು ಗೂಗಲ್ ಪ್ರಕಟಿಸಿದೆ.

ADVERTISEMENT

ಡೋನಟ್ ಮತ್ತು ಕೇಕ್, ಕ್ಯಾಂಡಲ್ ಸಹಿತ ಇರುವ ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ಗೂಗಲ್ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಪ್ರತಿ ವಿಶೇಷ ಸಂದರ್ಭ ಮತ್ತು ಆಚರಣೆಯನ್ನು ಗೂಗಲ್ ಸಂಭ್ರಮಿಸುವ ಸಲುವಾಗಿ, ಡೂಡಲ್ ರಚಿಸುತ್ತದೆ. ಅದೇ ರೀತಿ ತನ್ನ ಹುಟ್ಟುಹಬ್ಬಕ್ಕೂ ವಿಶೇಷ ಡೂಡಲ್ ಅನ್ನು ಗೂಗಲ್ ಪ್ರದರ್ಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.