ADVERTISEMENT

ವಿಂಡೋಸ್‌ ಡಿಫಾಲ್ಟ್ ಬ್ರೌಸರ್ ಆಯ್ಕೆ: ಮೈಕ್ರೋಸಾಫ್ಟ್ ನಡೆಗೆ ಮೊಝಿಲ್ಲಾ ಮೆಚ್ಚುಗೆ

ಐಎಎನ್ಎಸ್
Published 3 ಏಪ್ರಿಲ್ 2022, 16:38 IST
Last Updated 3 ಏಪ್ರಿಲ್ 2022, 16:38 IST
   

ಸ್ಯಾನ್ ಫ್ರಾನ್ಸಿಸ್ಕೊ: ಡಿಫಾಲ್ಟ್ ಬ್ರೌಸರ್ ಆಯ್ಕೆಯಲ್ಲಿ ಬಳಕೆದಾರರಿಗೆ ಹೊಸ ಅಪ್‌ಡೇಟ್ ನೀಡುವ ಮೂಲಕ ಮೈಕ್ರೋಸಾಫ್ಟ್ ಉತ್ತಮ ಕಾರ್ಯ ಮಾಡಿದೆ ಎಂದು ಮೊಝಿಲ್ಲಾ ಹೇಳಿದೆ.

ಮೈಕ್ರೋಸಾಫ್ಟ್ ವಿಂಡೋಸ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಹೊಸ ಅಪ್‌ಡೇಟ್ ಪ್ರಕಾರ, ಬಳಕೆದಾರರು ಅವರಿಷ್ಟದ ಬ್ರೌಸರ್ ಅನ್ನು ಡಿಫಾಲ್ಟ್ ಆಗಿ ಬಳಸಬಹುದು ಎಂದು ವಿಂಡೋಸ್ ಸೆಂಟ್ರಲ್ ವರದಿ ಹೇಳಿದೆ.

ಈ ಮೊದಲು, ಬಳಕೆದಾರರು ಡಿಫಾಲ್ಟ್ ಸೆಟ್ಟಿಂಗ್ಸ್ ಆಯ್ಕೆಯಲ್ಲಿ ಪ್ರತಿಯೊಂದು ಫೈಲ್ ಇಲ್ಲವೆ ಲಿಂಕ್ ಅನ್ನು ತೆರೆಯಲು, ವಿವಿಧ ಹಂತ ಅನುಸರಿಸಬೇಕಿತ್ತು. ಸೆಟ್ಟಿಂಗ್ಸ್ ಅನ್ನು ಬದಲಾಯಿಸಿಕೊಳ್ಳಬೇಕಿತ್ತು.

ADVERTISEMENT

ಆದರೆ, ಹೊಸ ಅಪ್‌ಡೇಟ್‌ನಲ್ಲಿ ಒಂದು ಕ್ಲಿಕ್ ಮೂಲಕ ಬಳಕೆದಾರರು ಡಿಫಾಲ್ಟ್ ಬ್ರೌಸರ್ ಆಯ್ಕೆ ಮಾಡಬಹುದು.

ಇದು ಸರಿಯಾದ ನಡೆ ಎಂದಿರುವ ಮೊಝಿಲ್ಲಾ, ಮೈಕ್ರೋಸಾಫ್ಟ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಡಿಫಾಲ್ಟ್ ಬ್ರೌಸರ್ ಬಳಕೆದಾರರ ಆಯ್ಕೆಗೆ ಬಿಟ್ಟಿರುವುದರಿಂದ, ಸೂಕ್ತ ಬ್ರೌಸರ್ ಆರಿಸಿಕೊಳ್ಳಬಹುದು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.