ADVERTISEMENT

ಮೊಬೈಲ್‌ನಲ್ಲಿ ಹೊಸತು

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:30 IST
Last Updated 30 ಜನವರಿ 2019, 19:30 IST
   

ಹುವಾವೆ 5ಜಿ ಫೋನ್‌

ಹುವಾವೆ ಕಂಪನಿ ಫೆಬ್ರುವರಿಯಲ್ಲಿ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ.ಅಮೆರಿಕದ ಬಿಡಿಭಾಗಗಳ ಮೇಲೆ ಅವಲಂಬಿತವಾಗದೆ, ತನ್ನದೇ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಿರುವುದು ಇದರ ವಿಶೇಷ.

ಮಡಚಬಹುದಾದ ಮೊದಲ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಅಮೆರಿಕದ ಚಿಪ್‌ಸೆಟ್‌ ಇರುವುದಿಲ್ಲ. ಇದಕ್ಕೆ ಬದಲಾಗಿ ಹುವಾವೆ ಕಂಪನಿಯದ್ದೇ ಆಗಿರುವ ಕಿರಿನ್ 980 ಚಿಪ್‌ಸೆಟ್‌ ಮತ್ತು ಬಲಾಂಗ್‌ 5000 ಮಾಡೆಮ್‌ ಬಳಸಲಾಗಿದೆ ಎಂದು ಸಿಇಒ ರಿಚರ್ಡ್‌ ಯು ತಿಳಿಸಿದ್ದಾರೆ.

ADVERTISEMENT

ಅಮೆರಿಕದೊಂದಿಗಿನ ಬಾಂಧವ್ಯ ಹಳಸಿರುವುದರಿಂದ ತನ್ನ ವಹಿವಾಟಿಗೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ತಾನೇ ಮೊಬೈಲ್‌ ಫೋನ್‌ ಚಿಪ್‌ಸೆಟ್‌ ಅಭಿವೃದ್ಧಿಪಡಿಸಲಾರಂಭಿಸಿದೆ. ಹೆಚ್ಚಿನ ವಿವರಗಳನ್ನು ಕಂಪನಿ ಇನ್ನಷ್ಟೇ ನೀಡಬೇಕಿದೆ.

ವಿಶ್ವದ ಮೊದಲ ಹೋಲ್‌ಲೆಸ್‌ ಫೋನ್‌ ‘ಮೀಜು ಜೀರೊ’

ಚೀನಾದ ಮೊಬೈಲ್‌ ತಯಾರಿಕಾ ಕಂಪನಿ ಮೀಜು ಟೆಕ್ನಾಲಜಿ ವಿಶ್ವದ ಮೊದಲ ಹೋಲ್‌ಲೆಸ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಮೀಜು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ 15 ವರ್ಷಗಳ ಸತತ ಪರಿಶ್ರಮದಿಂದ ಇದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.

ಹೋಲ್‌ಲೆಸ್‌ ಅಂದರೆ, ಚಾರ್ಜಿಂಗ್‌ ಪಾಯಿಂಟ್‌, ಸ್ಪೀಕರ್‌, ಸಿಮ್‌ ಸ್ಲಾಟ್‌, ಮೈಕ್‌ ಹೀಗೆ ಯಾವುದೇ ಹೋಲ್‌ ಇರುವುದಿಲ್ಲ.5.99 ಇಂಚ್ ಅಮೊಎಲ್‌ಇಡಿ ಪರದೆ. ಯುಎಚ್‌ಡಿ ರೆಸೊಲ್ಯೂಷನ್‌, ಪರದೆಯ ಕೆಳಭಾಗದಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇದೆ.

3ಡಿ ಸೆರಾಮಿಕ್‌ ಯುನಿಬಾಡಿ ವಿನ್ಯಾಸ,ಸೂಪರ್‌ ವೈರ್‌ಲೆಸ್‌ ಚಾರ್ಜರ್‌ ಎಂಚಾರ್ಜ್‌, ವೈರ್‌ಲೆಸ್‌ ಯುಎಸ್‌ಬಿ, ಎಂಸೌಂಡ್‌ 2.0 ಪರದೆಯನ್ನೇ ಸ್ಪೀಕರ್‌ನಂತೆ ಕಾರ್ಯನಿರ್ವಹಿಸುವಂತೆ ಮಾಡಲಿದೆ. ವರ್ಚುವಲ್‌ ಸೈಡ್‌ ಬಟನ್‌ ಪೋನ್‌ ಪವರ್‌ ಆಫ್‌ /ಆನ್‌ ಮಾಡಲು, ವಾಲ್ಯುಂ ಹೊಂದಿಸಲು ಎಂ–ಎಂಜಿನ್‌ 2.0 ನೆರವಾಗುತ್ತದೆ.ಸಂಗೀತ ಆಲಿಸಲು ಬ್ಲೂಟೂತ್‌ ಇಯರ್‌ಫೋನ್‌ ಬಳಸಬಹುದು. ಇ–ಸಿಮ್‌ ಆಯ್ಕೆ ನೀಡಿರುವುದರಿಂದ ಸಿಮ್‌ ಸ್ಲಾಟ್ ಇರುವುದಿಲ್ಲ. ಬಿಡುಗಡೆ ದಿನಾಂಕ ಮತ್ತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.