ಇಸ್ಲಾಮಾಬಾದ್: ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಚೀನಾದ ಟಿಕ್‌ಟಾಕ್ ಆ್ಯಪ್ ನಿರ್ಬಂಧಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.
ಸಮಾಜದ ಹಲವು ವಲಯಗಳಿಂದ ವಿಡಿಯೊ ಶೇರಿಂಗ್ ಅಪ್ಲಿಕೇಷನ್ ಟಿಕ್‌ಟಾಕ್‌ನಲ್ಲಿ ಅಸಭ್ಯವಾದ ವಿಡಿಯೊಗಳು ಇರುವುದಾಗಿ ದೂರುಗಳು ಬಂದಿವೆ. ದೂರುಗಳ ಆಧಾರದ ಮೇಲೆ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಟಿಕ್‌ಟಾಕ್ ಅಪ್ಲಿಕೇಷನ್ ನಿರ್ಬಂಧಿಸಲು ಸೂಚನೆ ನೀಡಿದೆ ಎಂದು ಪಿಟಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾನೂನು ಬಾಹಿರವಾದ, ಅಶ್ಲೀಲ ದೃಶ್ಯಗಳನ್ನು ಒಳಗೊಂಡಿರುವ ಕಂಟೆಂಟ್ ನಿಯಂತ್ರಿಸಲು ಪರಿಣಾಮಕಾರಿಯಾದ ವ್ಯವಸ್ಥೆ ಅಭಿವೃದ್ಧಿ ಪಡಿಸುವಂತೆ ನೀಡಲಾಗಿದ್ದ ಸೂಚನೆಯನ್ನು ಪಾಲಿಸುವಲ್ಲಿ ಕಂಪನಿ ವಿಫಲವಾಗಿರುವ ಕಾರಣ ಟಿಕ್‌ಟಾಕ್ ಆ್ಯಪ್ ನಿರ್ಬಂಧಿಸಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.