ADVERTISEMENT

Samsung 25ರ ಸಂಭ್ರಮ; ಬೆಂಗಳೂರಿನಲ್ಲಿ ಮಲ್ಟಿ-ಡಿವೈಸ್ ಇಂಟೆಲಿಜೆನ್ಸ್ ಅಭಿವೃದ್ಧಿ

ಪಿಟಿಐ
Published 10 ಫೆಬ್ರುವರಿ 2021, 17:36 IST
Last Updated 10 ಫೆಬ್ರುವರಿ 2021, 17:36 IST
ಸ್ಯಾಮ್‌ಸಂಗ್ ಆರ್ & ಡಿ ಘಟಕ ಬೆಂಗಳೂರು (ಚಿತ್ರ ಕೃಪೆ: ಸ್ಯಾಮ್‌ಸಂಗ್)
ಸ್ಯಾಮ್‌ಸಂಗ್ ಆರ್ & ಡಿ ಘಟಕ ಬೆಂಗಳೂರು (ಚಿತ್ರ ಕೃಪೆ: ಸ್ಯಾಮ್‌ಸಂಗ್)   

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿನ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದಲ್ಲಿ (ಎಸ್‌ಆರ್‌ಐ-ಬಿ) 5ಜಿ ಹೊರತಾಗಿ ಬಹುಸಾಧನಗಳ ಬುದ್ಧಿಮತ್ತೆ ತಂತ್ರಜ್ಞಾನ (ಮಲ್ಟಿ-ಡಿವೈಸ್ ಇಂಟೆಲಿಜೆನ್ಸ್), ಬ್ಲಾಕ್‌ಚೈನ್ ಹಾಗೂ ಡೇಟಾ ಸೈನ್ಸ್ಅಭಿವೃದ್ಧಿಪಡಿಸುವುದಾಗಿ ಸ್ಯಾಮ್ಸ್‌ಸಂಗ್ ಎಲೆಕ್ಟ್ರಾನಿಕ್ಸ್ ಬುಧವಾರ ಘೋಷಿಸಿದೆ.

ದಕ್ಷಿಣ ಕೊರಿಯಾ ಹೊರತಾಗಿ ಬೆಂಗಳೂರಿನಲ್ಲಿ ಅತಿ ದೊಡ್ಡ ಆರ್ & ಡಿ ಘಟಕವನ್ನು ಹೊಂದಿರುವ ಸ್ಯಾಮ್‌ಸಂಗ್, ಭಾರತಕ್ಕೆ ಕಾಲಿಟ್ಟು 25ನೇ ಯಶಸ್ವಿ ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿರುವ ಸ್ಯಾಮ್‌ಸಂಗ್, ಕಳೆದ ಹಲವಾರು ವರ್ಷಗಳಲ್ಲಿ ಬೆಂಗಳೂರಿನ ಆರ್ & ಡಿ ಘಟಕವು ಸಂಸ್ಥೆಯ ಸುಧಾರಿತ ಕೇಂದ್ರವಾಗಿ ಬೆಳೆದಿದೆ. ವೈರ್‌ಲೆಸ್ ಕಮ್ಯೂನಿಕೇಷನ್, ಮಲ್ಟಿಮೀಡಿಯಾ, ಇಮೇಜ್ ಪ್ರೊಸೆಸ್ಸಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಇನ್ ವಿಷನ್, ವಾಯ್ಸ್, ಟೆಕ್ಸ್ಟ್ ತಂತ್ರಜ್ಞಾನ, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದೆ.

ADVERTISEMENT

ಮುಂದಿನ ಐದು ವರ್ಷಗಳಲ್ಲಿ ಸ್ಯಾಮ್‌ಸಂಗ್ ಬೆಂಗಳೂರಿನ ಆರ್ & ಡಿ ಕೇಂದ್ರದಲ್ಲಿ ಮಲ್ಟಿ-ಡಿವೈಸ್ ಇಂಟೆಲಿಜೆನ್ಸ್, ಬ್ಲಾಕ್‌ಚೈನ್ ಹಾಗೂ ಡೇಟಾ ಸೈನ್ಸ್ಅಭಿವೃದ್ಧಿಸಲಿದ್ದು, ನಾವೀನ್ಯ ಕ್ಯಾಮೆರಾ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು 5ಜಿ ತಂತ್ರಗಾರಿಕೆಯಲ್ಲಿ ಗರಿಷ್ಠ ತಂತ್ರಜ್ಞಾನವನ್ನು ಒದಗಿಸಲಿದೆ ಎಂದು ತಿಳಿಸಿದೆ.

1996ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಸ್ಯಾಮ್‌ಸಂಗ್ ಆರ್ & ಡಿ ಘಟಕವು, 5ಜಿ, ಎಐ, ಕ್ಲೌಡ್ ಸರ್ವೀಸ್ ಜೊತೆಗೆ ಭಾರತಕ್ಕಾಗಿ ಸೀಮಿತ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಅವಿಷ್ಕಾರವನ್ನು ಮುಂದುವರಿಸುವುದಾಗಿ ತಿಳಿಸಿದೆ. ಇದಕ್ಕಾಗಿ ಸ್ಯಾಮ್‌ಸಂಗ್ ಎಂಜಿನಿಯರ್‌ಗಳು ಇದುವರೆಗೆ 3,200ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.