ADVERTISEMENT

ವಾಟ್ಸ್‌ಆ್ಯಪ್‌ಗೆ 'ಸಿಗ್ನಲ್‌' ಪೈಪೋಟಿ; ದಿಢೀರ್ ಮುಂಚೂಣಿಗೆ ಬಂದ ಆ್ಯಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2021, 4:31 IST
Last Updated 12 ಜನವರಿ 2021, 4:31 IST
ಸಿಗ್ನಲ್‌ ಆ್ಯಪ್‌
ಸಿಗ್ನಲ್‌ ಆ್ಯಪ್‌   

ವಾಟ್ಸ್‌ಆ್ಯಪ್‌ ಬಳಕೆದಾರರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ ಜೊತೆಗೆ ಹಂಚಿಕೊಳ್ಳುವ ಅಪ್‌ಡೇಟ್‌ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆ ಕಾವೇರಿದ್ದು, ಉದ್ಯಮಿಗಳು, ಟೆಕ್‌ ಕಂಪನಿಗಳು ಪ್ರಮುಖಗಳು ಈಗ ವಾಟ್ಸ್‌ಆ್ಯಪ್‌ನಿಂದ ಖಾಸಗಿ ಮಾಹಿತಿ ಸುರಕ್ಷತೆ ಹುಡುಕುತ್ತ 'ಸಿಗ್ನಲ್‌' ಕಡೆಗೆ ಹೊರಟಿದ್ದಾರೆ.

ಬಹುತೇಕ ಬಳಕೆದಾರರು ವಾಟ್ಸ್‌ಆ್ಯಪ್‌ ಹೊಸ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಕೆಲವು ಜನ ಈಗಾಗಲೇ ಟೆಲಿಗ್ರಾಂ ಹಾಗೂ ಸಿಗ್ನಲ್‌ ಆ್ಯಪ್‌ ಕಡೆಗೆ ಹೊರಳಿದ್ದಾರೆ. ಇನ್ನಷ್ಟು ಮಂದಿ ವಾಟ್ಸ್‌ಆ್ಯಪ್‌ನಲ್ಲೇ ಇರುವುದೊ, ಬಿಡುವುದೊ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಸಿಗ್ನಲ್‌ ಆ್ಯಪ್‌ ಗೂಗಲ್‌ ಪ್ಲೇಸ್‌ ಸ್ಟೋರ್‌ ಮತ್ತು ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಟಾಪ್‌ 1ನೇ ಸ್ಥಾನಕ್ಕೇರಿದೆ.

ಪೇಟಿಎಂ ಸಿಇಒ ವಿಜಯ್‌ ಶೇಖರ್‌ ಶರ್ಮಾ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ವಿರುದ್ಧ ಗುಡುಗಿದ್ದು, ಖಾಸಗಿ ಮಾಹಿತಿ ಸುರಕ್ಷತೆ ದೃಷ್ಟಿಯಿಂದ ಸಿಗ್ನಲ್‌ ಆ್ಯಪ್‌ ಬಳಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ ಎಲಾನ್‌ ಮಸ್ಕ್‌ ಸಹ ಕಳೆದ ವಾರ 'ಸಿಗ್ನಲ್‌' ಆ್ಯಪ್‌ ಬಳಕೆ ಬಗ್ಗೆ ಹೇಳಿಕೊಂಡಿದ್ದು ಹಲವು ಜನರ ಗಮನ ಸೆಳೆದಿದೆ.

ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪತ್ರಕರ್ತರು, ವಕೀಲರು, ಸಂಶೋಧಕರು, ಭದ್ರತಾ ತಜ್ಞರು ಸಿಗ್ನಲ್‌ ಆ್ಯಪ್‌ ಹೆಚ್ಚು ಬಳಕೆ ಮಾಡುತ್ತಿದ್ದು, ಟ್ವಿಟರ್ ಸಿಇಒ ಜ್ಯಾಕ್ ಡೋರ್ಸಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಬಹಿರಂಗ ಪಡಿಸಿದ್ದ ಎಡ್ವರ್ಡ್‌ ಸ್ನೋಡೆನ್‌ ಈ ಆ್ಯಪ್‌ನ ಹಿಂದಿದ್ದಾರೆ. ಸಿಗ್ನಲ್‌ ಫೌಂಡೇಷನ್‌ ಮತ್ತು ಸಿಗ್ನಲ್‌ ಮೆಸೆಂಜರ್‌ ಎಲ್‌ಎಲ್‌ಸಿ ಕಂಪನಿ ಈ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ವಾಟ್ಸ್‌ಆ್ಯಪ್‌ನ ಸಹ–ಸಂಸ್ಥಾಪಕ ಬ್ರಿಯಾನ್‌ ಆಕ್ಟನ್‌ ಮತ್ತು ಸಿಗ್ನಲ್‌ ಮೆಸೆಂಜರ್‌ ಸಿಇಒ ಮಾಕ್ಸಿ ಮಾರ್ಲಿನ್‌ಸ್ಪೈಕ್‌ ಸಿಗ್ನಲ್‌ ಫೌಂಡೇಷನ್‌ ಸ್ಥಾಪಿಸಿದರು. 2017ರಲ್ಲಿ ವಾಟ್ಸ್‌ಆ್ಯಪ್‌ನಿಂದ ಹೊರಬಂದ ಆಕ್ಟನ್‌ 'ಸಿಗ್ನಲ್‌'ಗಾಗೊ 50 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.