ADVERTISEMENT

ಶೀಘ್ರದಲ್ಲಿಯೇ ವಾಟ್ಸ್‌ಆ್ಯಪ್‌ನಲ್ಲಿಯೂ ಶಾಪಿಂಗ್ ಮಾಡಬಹುದು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:51 IST
Last Updated 23 ಅಕ್ಟೋಬರ್ 2020, 2:51 IST
ವಾಟ್ಸ್‌ಆ್ಯಪ್‌ನಲ್ಲಿ ಶಾಪಿಂಗ್  (ಚಿತ್ರ ಕೃಪೆ: ವಾಟ್ಸ್‌ಆ್ಯಪ್ ಬ್ಲಾಗ್)
ವಾಟ್ಸ್‌ಆ್ಯಪ್‌ನಲ್ಲಿ ಶಾಪಿಂಗ್ (ಚಿತ್ರ ಕೃಪೆ: ವಾಟ್ಸ್‌ಆ್ಯಪ್ ಬ್ಲಾಗ್)   

ಬೆಂಗಳೂರು:ವಾಟ್ಸ್‌ಆ್ಯಪ್‌ನಲ್ಲಿಯೂ ಶಾಪಿಂಗ್ ಮಾಡುವ ಫೀಚರ್ಶೀಘ್ರದಲ್ಲೇ ಲಭ್ಯವಾಗಲಿದೆ.ವಾಟ್ಸ್‌ಆ್ಯಪ್ ಬ್ಯುಸಿನೆಸ್ ಅಕೌಂಟ್ ಹೊಂದಿದ್ದರೆ ಚಾಟ್ ಸ್ಕ್ರೀನ್‌ನಿಂದ ಕೆಟಲಾಗ್‌ಗಳನ್ನು ಗ್ರಾಹಕರಿಗೆ ನೀಡುವ ಮೂಲಕ ನೇರವಾಗಿ ಉತ್ಪನ್ನಗಳನ್ನು ಮಾರಬಹುದು. ಈ ಮೂಲಕಲಭ್ಯವಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಭವಾಗಿ ನೋಡಲು ಮತ್ತು ಚಾಟ್ ಮೂಲಕ ನೇರವಾಗಿ ಖರೀದಿ ಮಾಡಲು ಸಾಧ್ಯವಾಗುವಂತೆ ಮಾಡಲಾಗುವುದು ಎಂದು ವಾಟ್ಸ್‌ಆ್ಯಪ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಗ್ರಾಹಕರು ತಾವು ಖರೀದಿಸಲು ಬಯಸುವ ಉತ್ಪನ್ನಗಳನ್ನು ಶಾಪಿಂಗ್ ಕಾರ್ಟ್‌ಗೆ ಸೇರಿಸಿ ಉತ್ಪನ್ನಗಳನ್ನು ಖರೀದಿಸಬಹುದು.
ಈ ಫೀಚರ್‌ಗಳನ್ನು ಈಗಾಗಲೇ ಇರುವ ವಾಣಿಜ್ಯ ಮತ್ತುಗ್ರಾಹಕ ಪರಿಹಾರಗಳೊಂದಿಗೆ ಸಂಯೋಜಿಸುವ ಮೂಲಕ ವ್ಯವಹಾರಗಳನ್ನು ಮತ್ತಷ್ಟು ಸುಲಭಗೊಳಿಸಲು ನಾವು ಬಯಸುತ್ತೇವೆ.ಪ್ರಸ್ತುತ ಕಾಲಘಟ್ಟದಲ್ಲಿ ನಷ್ಟ ಅನುಭವಿಸುತ್ತಿರುವ ಹಲವಾರು ಸಣ್ಣ ಉದ್ಯಮಗಳಿಗೆ ಇದು ಸಹಾಯವಾಗಲಿದೆ ಎಂದು ಕಂಪನಿ ಹೇಳಿದೆ.

ಮುಂಬರುವ ತಿಂಗಳಲ್ಲಿ ಈ ಶಾಪಿಂಗ್ ಫೀಚರ್ ಲಭ್ಯವಾಗಲಿದೆ.

ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಈ ಹೆಚ್ಚುವರಿ ಅನುಭವವು ಪ್ರಪಂಚದಾದ್ಯಂತ ಮತ್ತು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಅನೇಕ ಜನರ ಮತ್ತು ವ್ಯಾಪಾರದನಿಜವಾದ ಅಗತ್ಯವನ್ನು ಪೂರೈಸುತ್ತವೆ ಎಂಬುದು ನಮ್ಮ ನಂಬಿಕೆ. ಮುಂಬರುವ ಕಾರ್ಯಗಳ ಬಗ್ಗೆ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಮುಂದಿನ ತಿಂಗಳುಗಳಲ್ಲಿ ನಾವು ಈ ಸೇವೆಗಳನ್ನು ಒದಗಿಸಲಿದ್ದೇವೆ ಎಂದು ವಾಟ್ಸ್‌ಆ್ಯಪ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.