ADVERTISEMENT

ಜಾಮ್‌ನಗರದಿಂದ ದ್ವಾರಕಾಕ್ಕೆ 141 KM ಪಾದಯಾತ್ರೆ ಹೊರಟ ಅನಂತ್ ಅಂಬಾನಿ! ಕಾರಣ ಏನು?

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2025, 3:17 IST
Last Updated 1 ಏಪ್ರಿಲ್ 2025, 3:17 IST
<div class="paragraphs"><p>ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.</p></div>

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.

   

ಬೆಂಗಳೂರು: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.

ದೈವಭಕ್ತರೂ ಆಗಿರುವ ಅನಂತ್, ಗುಜರಾತ್‌ನ ಜಾಮ್‌ನಗರದಿಂದ ದೇವಭೂಮಿ ದ್ವಾರಕಾಕ್ಕೆ 141 ಕಿ.ಮೀ ‍ಪಾದಯಾತ್ರೆ ಹೊರಟಿದ್ದಾರೆ. ಸದ್ಯ ಅವರು ದ್ವಾರಕಾದ ಸನಿಹ ಇದ್ದಾರೆ. ಮುಂದಿನ ನಾಲ್ಕೈದು ದಿನದಲ್ಲಿ ಅವರು ದ್ವಾರಕಾ ತಲುಪಲಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಏಪ್ರಿಲ್ 10 ರಂದು ಅನಂತ್ ಅವರ ಜನ್ಮದಿನವಿದ್ದು ಆ ಪ್ರಯುಕ್ತ ಪಾದಯಾತ್ರೆ ಮೂಲಕ ದ್ವಾರಕಾ ತೆರಳಿ ಭಗವಾನ್ ಕೃಷ್ಣನ ದರ್ಶನ ಮಾಡಲಿದ್ದಾರೆ. ಅಲ್ಲದೇ ಅವರು ದ್ವಾರಕಾದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಭದ್ರತೆ ಕಾರಣದಿಂದ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಅನಂತ್ ಅಂಬಾನಿ ಅವರು ರಾತ್ರಿ ಹೊತ್ತು ಪಾದಯಾತ್ರೆಯನ್ನು ಮಾಡುತ್ತಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅನಂತ್ ಅವರು, ಕಳೆದ ಐದು ದಿನದ ಹಿಂದೆ ಜಾಮ್‌ನಗರದ ನಮ್ಮ ಮನೆಯಿಂದ ದ್ವಾರಕಾಕ್ಕೆ ಪಾದಯಾತ್ರೆ ಆರಂಭಿಸಿದ್ದೇನೆ. ಯಾವುದೇ ಕೆಲಸ ಮಾಡುವ ಮೊದಲು ನಾವು ದೇವರಲ್ಲಿ ನಂಬಿಕೆ ಇಟ್ಟರೇ ಅದು ಖಂಡಿತವಾಗಿಯೂ ಕೈಗೂಡುತ್ತದೆ. ದೇವರು ಇರುವಾಗ ಚಿಂತೆಗೆ ಜಾಗ ಇಲ್ಲ. ದ್ವಾರಕಾಧೀಶನು ನಮ್ಮನ್ನು ಆಶೀರ್ವದಿಸಲಿ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಎಕ್ಸ್‌ ತಾಣದಲ್ಲಿ ಅನಂತ್ ಅಂಬಾನಿ ಅವರು ಮಾತನಾಡಿರುವ ವಿಡಿಯೊ ಹಂಚಿಕೊಂಡಿದೆ.

ಕಳೆದ ವರ್ಷ ಅನಂತ್ ಅವರು ರಾಧಿಕಾ ಮರ್ಚಂಟ್ ಅವರನ್ನು ಅದ್ಧೂರಿಯಾಗಿ ವಿವಾಹವಾಗಿ ಸುದ್ದಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.