ಟ್ಯಾಟೂ –ಟ್ವಿಟರ್ ಚಿತ್ರ @GWR
ಬ್ರಿಟನ್: ದೇಹದ ಮೇಲೆ ಮಗಳ ಹೆಸರನ್ನು 667 ಬಾರಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಯುಕೆ ಮೂಲದ 49 ವರ್ಷದ ವ್ಯಕ್ತಿಯೊಬ್ಬರು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಪಟ್ಟಿ ಸೇರಿದ್ದಾರೆ.
ಮಾರ್ಕ್ ಇವಾನ್ ಇವಾನ್ಸ್ ಎನ್ನುವ ವ್ಯಕ್ತಿ ಮಗಳಿಗೆ ಇಟ್ಟಿರುವ ಲುಸಿ ಎಂಬ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
2017ರಲ್ಲಿ ಬೆನ್ನಿನ ಮೇಲೆಯೇ 267 ಬಾರಿ ಬರೆಸಿಕೊಂಡು ದಾಖಲೆ ನಿರ್ಮಿಸಿದ್ದರು. ಆದರೆ ಅಮೆರಿಕದ ಡೈಯೇಡ್ರಾ ವಿಗಿಲ್ ಎನ್ನುವಾಕೆ ತನ್ನದೇ ಹೆಸರನ್ನು 300 ಬಾರಿ ಟ್ಯಾಟೂ ಹಾಕಿಸಿಕೊಂಡು 2020ರಲ್ಲಿ ಇವಾನ್ ದಾಖಲೆಯನ್ನು ಮುರಿದಿದ್ದರು.
ಇದೀಗ ಇವಾನ್ ಮತ್ತೆ 400 ಬಾರಿ ಮಗಳ ಹೆಸರನ್ನು ಬರೆಸಿಕೊಳ್ಳುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಬೆನ್ನಿನ ಮೇಲೆ ಜಾಗವಿಲ್ಲದೆ ಕಾಲಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಟ್ಯಾಟೂ ಕಲಾವಿದ ಡೆಕ್ಸ್ಟೆರಿಟಿ ಎನ್ನುವವರು ಇವಾನ್ ಅವರ ದೇಹದ ಮೇಲೆ ಟ್ಯಾಟೂ ಹಾಕಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.