ADVERTISEMENT

ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 6:14 IST
Last Updated 9 ಜನವರಿ 2026, 6:14 IST
<div class="paragraphs"><p>ಕಲೀಗ್ಸ್ಟೆ ಎನ್ಜಾಂವೀಟಾ</p></div>

ಕಲೀಗ್ಸ್ಟೆ ಎನ್ಜಾಂವೀಟಾ

   

ಚಿತ್ರಕೃಪೆ: ಯೂಟ್ಯೂಬ್ ಸ್ಕ್ರೀನ್‌ಗ್ರ್ಯಾಬ್

ತನ್ನ 16ನೇ ವಯಸ್ಸಿನಲ್ಲಿ ಜೀವನದ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡ ಆ ವ್ಯಕ್ತಿ, ಮುಂದಿನ ಅರ್ಧ ಶತಮಾನವನ್ನು ಅಜ್ಞಾತವಾಸದಲ್ಲಿ ಕಳೆಯುತ್ತಾರೆ. 'ಗೈನೊಫೋಬಿಯಾ' ಎನ್ನುವ ವಿಚಿತ್ರ ಕಾಯಿಲೆ ಆತನ ಈ ನಿರ್ಧಾರಕ್ಕೆ ಕಾರಣ. ಮಹಿಳೆಯರನ್ನು ಕಂಡರೆ ವಿಪರೀತ ಭಯಪಡುವ ಈ ವ್ಯಕ್ತಿ, ಇಂದಿಗೂ ಪ್ರತ್ಯೇಕವಾಗಿ ವಾಸವಿದ್ದಾರೆ‌.

ADVERTISEMENT

ಆಫ್ರಿಕಾದ ರುವಾಂಡ ನಿವಾಸಿ ಕಲೀಗ್ಸ್ಟೆ ಎನ್ಜಾಂವೀಟಾ, ಸುಮಾರು 56 ವರ್ಷದಿಂದ ಮಹಿಳೆಯರ ಮುಖ ನೋಡದೆ, ಅವರ ಸಂಪರ್ಕಕ್ಕೆ ಬಾರದೆ ಬದುಕುತ್ತಿದ್ದಾರೆ. ‘ಗೈನೋಫೋಬಿಯಾ’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರು, ಮಹಿಳೆಯರು ಕಣ್ಣಿಗೆ ಬೀಳದಂತೆ ಮಾಡಲು ಮನೆಯ ಸುತ್ತ ಬೇಲಿ ಹಾಕಿ ಅದಕ್ಕೆ ಬಟ್ಟೆಯನ್ನು ನೇತು ಹಾಕಿ ಬಂದೋಬಸ್ತ್‌ ಮಾಡಿಕೊಂಡಿದ್ದಾರೆ.

ಜೀವನದಲ್ಲಿ ಇಂತಹ ಕಠಿಣ ನಿರ್ಧಾರ ತಳೆಯಲು ಕಾರಣವೇನು ಎಂಬುವುದನ್ನು ಎನ್ಜಾಂವೀಟಾ ಅವರು ‘ಆಫ್ರಿಮ್ಯಾಕ್ಸ್ ಪಬ್ಲಿಷರ್ಸ್ & ಜನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌’ನ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಬಾಲ್ಯದಿಂದಲೂ ಮಹಿಳೆಯರನ್ನು ಕಂಡರೆ ವಿಪರೀತ ಭಯವಾಗುತ್ತಿತ್ತು. ಮಹಿಳೆಯರು ನೋವು, ಹಿಂಸೆ ಮಾಡುತ್ತಾರೆ ಅನಿಸುತ್ತದೆ. ಅನೇಕ ರೀತಿಯ ಚಿಕಿತ್ಸೆ ಮಾಡಿದರೂ ಆ ಭಯ ನನ್ನನ್ನು ಬಿಟ್ಟಿಲ್ಲ ಎನ್ನುತ್ತಾರೆ ಎನ್ಜಾಂವೀಟಾ.

'ಅದಕ್ಕಾಗಿ ನಾನು ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದೆ. ಮಹಿಳೆಯರು ನನ್ನ ಬಳಿ ಸುಳಿಯದಂತೆ ಮಾಡಲು ಮನೆಯ ಸುತ್ತ ಬೇಲಿ ಹಾಕಿ ಮರೆಮಾಡಿಕೊಂಡೆ' ಎಂದಿದ್ದಾರೆ.

ಆದಾಗ್ಯೂ, 2023ರಲ್ಲಿ ಮಹಿಳೆಯೊಬ್ಬರು ನನ್ನ ಮನೆಯನ್ನು ಪ್ರವೇಶಿಸಿದ್ದಾರೆ. ಸಂದರ್ಶನ ಮಾಡಲು ಬಂದ ಆ ಮಹಿಳೆ ಹಲವು ಪುರಷರ ನಡುವೆ ಇದ್ದಿದ್ದರಿಂದ ನನಗೆ ಭಯವಾಗಿಲ್ಲ ಎಂದು ಹೇಳಿದ್ದಾರೆ.

ಆದರೆ, ಎನ್ಜಾಂವೀಟಾ ಅವರಿಗೆ ಆಹಾರ ತಂದುಕೊಡುವುದು ಅದೇ ಹಳ್ಳಿಯ ಮಹಿಳೆಯರಂತೆ. ಬಟ್ಟಲಲ್ಲಿ ಆಹಾರ ತರುವ ಅವರು ಎನ್ಜಾಂವೀಟಾ ಮನೆಯ ಹತ್ತಿರ ಇಟ್ಟು ಹೋಗುತ್ತಾರೆ. ಅವರು ಅಲ್ಲಿಂದ ಮರೆಯಾದ ಮೇಲೆ ಅಲ್ಲಿ ಇಟ್ಟಿದ್ದ ಆಹಾರವನ್ನು ತೆಗೆದುಕೊಂಡು ತಿನ್ನುತ್ತಾರೆ.

ಗೈನೋಫೋಬಿಯಾ ಎಂಬುದು ಒಂದು ಮಾನಸಿಕ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಬಳಲು ವ್ಯಕ್ತಿಗೆ ಹೆಣ್ಣನ್ನು ಕಂಡರೆ ವಿಪರೀತ ಭಯ, ಆತಂಕ, ಮುಜುಗರ, ದ್ವೇಷ ಹೀಗೆ ಅನೇಕ ರೀತಿಯ ಭಾವನೆಗಳು ಮೂಡುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.