Landy Párraga
Landy Párraga
ಬೆಂಗಳೂರು: ಈಕ್ವೆಡಾರ್‌ನ ಮಾಡೆಲ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ ಲ್ಯಾಂಡಿ ಪರಾಗಾ (Landy Párraga) ಎನ್ನುವರನ್ನು ದುಷ್ಕರ್ಮಿಗಳು ಇತ್ತೀಚೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇವರ ಕೊಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು ಲ್ಯಾಂಡಿ ಅವರು ಸಾಯುವ ಕೆಲ ನಿಮಿಷಗಳ ಮುಂಚೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರ ಲೊಕೇಷನ್ ಜಾಡು ಹಿಡಿದು ದುಷ್ಕರ್ಮಿಗಳು ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೇ 4ರಂದು Quevedo ಎಂಬ ಪಟ್ಟಣದ ರೆಸ್ಟೊರಂಟ್ ಒಂದರಲ್ಲಿ ಲ್ಯಾಂಡಿ ಅವರು ಆಹಾರ ಸೇವಿಸುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಆಕೆಯ ಮೇಲೆ ಸನಿಹದಿಂದ ಹಲವು ಸುತ್ತಿನ ಗುಂಡಿನ ದಾಳಿ ನಡೆದಿದೆ. ಘಟನೆ ರೆಸ್ಟೊರಂಟ್ ಸಿಸಿಟಿವಿಯಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಲ್ಯಾಂಡಿ ಪರಾಗಾ ಮಿಸ್ ಈಕ್ವೆಡಾರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು.
ಈ ಮಾಡೆಲ್, ಈಕ್ವೆಡಾರ್‌ನ ಸಂಘಟಿತ ಅಪರಾಧ ಲೋಕದ ಜೊತೆ ನಂಟು ಹೊಂದಿದ್ದರು. ಎದುರಾಳಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.