ADVERTISEMENT

ಸಿಐ ಈಗ ಸಂಸದ; ಮೇಲಧಿಕಾರಿಯಿಂದ ಸೆಲ್ಯೂಟ್ ಸ್ವೀಕರಿಸುತ್ತಿರುವ ಫೋಟೊ ವೈರಲ್

​ಪ್ರಜಾವಾಣಿ ವಾರ್ತೆ
Published 26 ಮೇ 2019, 9:09 IST
Last Updated 26 ಮೇ 2019, 9:09 IST
   

ಹೈದರಾಬಾದ್: ಹಿರಿಯ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದ ಆಂಧ್ರ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ಈಗ ಅದೇ ಪೊಲೀಸ್ ಅಧಿಕಾರಿಗಳು ತನಗೆ ಸೆಲ್ಯೂಟ್ ಹೊಡೆಯುವಂತೆ ಮಾಡಿದ್ದಾರೆ. ಆಂಧ್ರದ ಸರ್ಕಲ್ ಇನ್ಸ್‌ಪೆಕ್ಟರ್ ಗೋರಂಟ್ಲಮಾಧವ್ ಈಗ ಸಂಸದ. ಅನಂತಪುರಜಿಲ್ಲೆಯ ಹಿಂದೂಪುರ್ ಲೋಕಸಭಾ ಕ್ಷೇತ್ರದಿಂದ ಮಾಧವ್ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಸಂಸದರಾದ ನಂತರ ಮಾಧವ್ ಅವರ ಹಳೆಯ ಬಾಸ್ , ಸಿಐಡಿ ಡೆಪ್ಯುಟಿ ಸುಪರಿಟೆಂಡೆಂಟ್ ಆಫ್ ಪೊಲೀಸ್ಮೆಹಬೂಬ್ ಪಾಷಾ, ನೂತನ ಸಂಸದರಿಗೆಸೆಲ್ಯೂಟ್ ಹೊಡೆಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿಗಳೊಂದಿಗೆ ಇರುವ ಪಾಶಾ ಮತ್ತು ಮಾಧವ್ ನಗುತ್ತಾ ಸೆಲ್ಯೂಟ್ ಹೊಡೆಯುತ್ತಿರುವ ಫೋಟೊ ಇದಾಗಿದೆ.

ಕದಿರಿ ಸಿಐ ಆಗಿದ್ದ ಮಾಧವ್ ಹಿಂದೂಪುರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಟಿಡಿಪಿ ಸಂಸದ ಕ್ರಿಸ್ತಪ್ಪನಿಮ್ಮಲ ಅವರನ್ನು 1,40,748 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ADVERTISEMENT

ಮತ ಎಣಿಕೆ ಕೇಂದ್ರದ ಹೊರಗೆ ಕ್ಲಿಕ್ಕಿಸಿದ ಫೋಟೊ ಇದಾಗಿದೆ. ವೈರಲ್ ಫೋಟೊ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧವ್, ನಾನು ಮೊದಲು ಡೆಪ್ಯುಟಿ ಎಸ್‌ಪಿ ಅವರಿಗೆ ಸೆಲ್ಯೂಟ್ ಹೊಡೆದೆ. ನಾನು ಅವರನ್ನು ಗೌರವಿಸುತ್ತೇನೆ. ನಾವಿಬ್ಬರೂ ಪರಸ್ಪರ ಗೌರವಿಸುತ್ತೇವೆ ಎಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.